ಗಣೇಶ ಪಿ. ನಾಡೋರ ಅವರು ಮಕ್ಕಳಿಗಾಗಿ ಬರೆದ ಕೃತಿ-ಪ್ರಾಣಿಗಳ್ಳರು ಮತ್ತು ಮಯೂರ. ಈ ಕೃತಿಗೆ ಬಿ.ಎಂ.ಶ್ರೀ. ಪ್ರತಿಷ್ಠಾನದ ಸಾವಿತ್ರಮ್ಮ ದತ್ತಿ ಮಕ್ಕಳ ಪ್ರಶಸ್ತಿ (2001) ಲಭಿಸಿದೆ. ಈ ಸಂಕಲನದಲ್ಲಿ ಹಾವು ಮಾಡಿದ ಮೋಸ, ದುರಹಂಕಾರ ಒಳ್ಳೆಯದಲ್ಲ, ಮೊಲದ ಮರಿಯೂ ಚಿರತೆಯ ಮರಿಯೂ, ಬದುಕುವ ಹಕ್ಕು, ಕಾಗೆಯ ಉಪಕಾರ, ಅಯ್ಯೋ...ಪೆದ್ದ ಕೋಳಿಗಳಾ..., ಸೇಡು ಹೀಗೆ ಇತರೆ ಕಥೆಗಳಿವೆ.
ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದವರು. ಹುಟ್ಟಿದ್ದು: 23 ಡಿಸೆಂಬರ್ 1969. ತಂದೆ ಆರ್. ಪಲವೇಸಮುತ್ತು ನಾಡಾರ್ ತಮಿಳುನಾಡಿನ ಚೆಟ್ಟಿಕುಳಂ ಮೂಲದವರು. ತಾಯಿ ಮಹಾದೇವಿ ಹರಿಕಂತ್ರ ನಾಡಾರ್ ಗೋಕರ್ಣ ಸಮೀಪದ ತೊರೆಗಜನಿಯವರು. ಇಲ್ಲಿಯವರೆಗೆ ಮಕ್ಕಳಿಗಾಗಿ 15 ಪುಸ್ತಕಗಳನ್ನು ಪ್ರಕಟಿಸಿದ್ದಾರೆ. 'ಬೆಳ್ಳಕ್ಕಿ ಮತ್ತು ಬುಲ್ ಬುಲ್', 'ನೆಗೆತ', 'ಕರಿಮುಖ' 'ಆಟ' ಪ್ರಮುಖ ಮಕ್ಕಳ ಸಾಹಿತ್ಯ ಕೃತಿಗಳು. ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿ, ಬಿಎಂಶ್ರೀ ಪ್ರತಿಷ್ಠಾನದ ಪ್ರಶಸ್ತಿ, ಸಂಧ್ಯಾ ಸಾಹಿತ್ಯ ವೇದಿಕೆಯ ಮೇವುಂಡಿ ಮಲ್ಲಾರಿ ವಿಶೇಷ ಪುರಸ್ಕಾರ, ಬಾಲವಿಕಾಸ ಅಕಾಡೆಮಿ ಪ್ರಶಸ್ತಿ ಸಂದಿವೆ. ಜೀವನೋಪಾಯ ಕ್ಕಾಗಿ ಹೈದರಾಬಾದಿನ ...
READ MORE