ಶ್ರೀಮತಿ ನಂಜಮ್ಮ ಶ್ರೀನಿವಾಸರಾವ್ ಪುಸ್ತಕ ಮಾಲೆಯಡಿ ಮಕ್ಕಳಿಗಾಗಿ ’ಕಾಗಜ್ಜನ ನ್ಯಾಯ’ ಕೃತಿ ಪ್ರಕಟಿಸಲಾಗಿದೆ. ಇಲ್ಲಿಯ ಕಥೆಗಳು ಕೇವಲ ಹಕ್ಕಿಗಳ ಜೀವನಕ್ರಮಗಳ ಕುರಿತು ಬರೆದ ಬರೆಹಗಳಲ್ಲ, ಪ್ರಾಣಿ-ಪಕ್ಷಿಗಳ ಪ್ರಪಂಚವನ್ನು ಮನುಷ್ಯನ ಮನಸ್ಸು ಹೇಗೆಲ್ಲ ನೋಡುತ್ತದೆ, ಕಲ್ಪಿಸಿಕೊಳ್ಳುತ್ತದೆ ಎಂಬ ಜ್ಞಾನವೂ ಈ ಕಥೆಗಳು ಒಳಗೊಂಡಿವೆ. ವಿಶೇಷವಾಗಿ ಮಕ್ಕಳಲ್ಲಿ ಇಲ್ಲಿಯ ಕಥೆಗಳು ಹಕ್ಕಿಗಳ ಬಗ್ಗೆ ತೀವ್ರ ಕುತೂಹಲ ಕೆರಳಿಸುತ್ತವೆ. ಇಲ್ಲಿಯ ಎಲ್ಲ ಕಥೆಗಳಲ್ಲಿ ಜೀವನ ಪ್ರೀತಿಯನ್ನು ಕಾಣುತ್ತೇವೆ.
ಹಿರಿಯ ಲೇಖಕಿ ಶಾಂತಾ ನಾಗರಾಜ್ ಅವರು ಎಂ..ಎ. (ಕನ್ನಡ) ಪದವೀಧರರು. ತಂದೆ ಎಸ್.ವಿ. ಹರಿದಾಸ್, ತಾಯಿ ಸೀತಾಬಾಯಿ. ವೃತ್ತಿಯಲ್ಲಿ ಉಪನ್ಯಾಸಕರು. ಆಪ್ತ ಸಲಹೆಗಾರರೂ ಆಗಿದ್ದಾರೆ. ಕೃತಿಗಳು: ನೀವು ಯಶಸ್ವಿ ಗೃಹಿಣಿಯೆ?, ಶಾಲಾ ಮಕ್ಕಳ ಪೋಷಕರಿಗೆ ಕಿವಿಮಾತು (2017), ದುಗುಡ ಕಳೆಯುವ ಮಾರ್ಗ(2009) ವ್ಯಕ್ತಿವಿಕಸನ ಮಾಲೆಯ ಕೃತಿಗಳು.. ಕಿತ್ತು ತಿನ್ನುವ ಮುಪ್ಪು (1989) ಕಾದಂಬರಿ, ಬಾಲಾಪರಾಧಿಗಳು (1984), ಸ್ವಉದ್ಯೋಗ ತೆರೆದ ಹೆಬ್ಬಾಗಿಲು ಕವನ ಸಂಕಲನ ಪ್ರಕಟಿಸಿದ್ದಾರೆ. ಡಾಲರ್ ಹಕ್ಕಿ (2002) ಪ್ರವಾಸ ಕಥನ ಮತ್ತು ಯಾನ ಸಂಸ್ಕತಿ ಇವರ ಕಥಾಸಂಕಲನ. ಪಟ್ಟದಗೊಂಬೆಯೂ ಪರದೇಶವೂ (2009)ರಲ್ಲಿ, ಭಾಷಾಂತರ (ಇತರರೊಂದಿಗೆ): ಅಭಿವೃದ್ಧಿ ಆಳಿಕೆ ಮತ್ತು ಮಾನವೀಯ ಮೌಲ್ಯಗಳು, ರೆಕ್ಕೆಯ ...
READ MORE