ಲೇಖಕ ಆನಂದ ಪಾಟೀಲ ಅವರು ಬರೆದ ಮಕ್ಕಳ ಕಥನ ಕವನ ʻಸ್ಟ್ರೈಕು, ಟ್ರಕ್ಕು ಹುಡಗೂರುʼ. ಪುಸ್ತಕದ ಬಗ್ಗೆ ಲೇಖಕರು ಹೇಳುವಂತೆ, “ಪುಸ್ತಕವು ಗ್ರಾಮೀಣ ಪರಿಸರದ ಬಡ ಮಕ್ಕಳ ನಡುವೆ ಹಣ್ಣಿನ ಲಾರಿಯೊಂದು ಬಂದು ನಿಲ್ಲುವ ಪ್ರಸಂಗ ನಗು, ಕೇಕೆಯನ್ನು ತುಂಬಿಕೊಳ್ಳುತ್ತಲೇ ಗಾಢವಾಗಿ ನಮ್ಮನ್ನು ಆವರಿಸುವ ವಾಸ್ತವದ ಕತೆಯಾಗತೊಡಗುತ್ತದೆ. ಇದೊಂದು ಕಥನ ಕವಿತೆ, ಜೊತೆಜೊತೆಗೇ ನಮ್ಮನ್ನೆಲ್ಲ ಹಿಡಿದಿಡುವ ಮಾನವೀಯತೆ”. ಸಂತೋಶ್ ಸಸಿಹಿತ್ಲು ಅವರು ಪುಸ್ತಕದಲ್ಲಿ ಚಿತ್ರಗಳನ್ನು ರೂಪಿಸಿದ್ದಾರೆ.
ಆನಂದ ವಿ. ಪಾಟೀಲ ಅವರು ಜನವರಿ 1-1955, ಧಾರವಾಡ ಜಿಲ್ಲೆಯ ನಾಗಲಿಂಗನ ನವಲಗುಂದದಲ್ಲಿ ಜನಿಸಿದರು. ವಿದ್ಯಾಭ್ಯಾಸ- ಘಟಪ್ರಭಾ, ನವಲಗುಂದ, ಗೋಕಾಕ, ಹಿಡಕಲ್ ಮತ್ತು ಧಾರವಾಡಗಳಲ್ಲಿ ಮುಗಿಸಿದ ಅವರು, ಜಾನಪದ ಕಲೆ ಮತ್ತು ವಿಧಿ ಕ್ರಿಯೆಗಳು' ಕುರಿತ ಪ್ರೌಢ ಪ್ರಬಂಧಕ್ಕೆ ಧಾರವಾಡ ವಿ.ವಿ.ಯಿಂದ ಡಾಕ್ಟರೇಟ್ ಪದವಿ ಪಡೆದಿದ್ದಾರೆ. ಸದ್ಯ ಆಕಾಶವಾಣಿಯಲ್ಲಿ ಉಪ ನಿರ್ದೇಶಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. “ಅಜ್ಜಿ ಮನೆ ಬಹಳ ದೂರ', 'ಹೂ', 'ಹಕ್ಕಿ ಪುಟಾಣಿ', 'ಹೂ ಅಂದ್ರ ಹೂ', “ಅಜ್ಜಿ ಬಿಡಿಕಾಳ್ ಬಿಡಿಕಾಳು', 'ಪಪ್ಪಿ ಕೊಟ್ಟು ಬಾಪೂ', 'ಹೃದ್ಧಿ', 'ಪುಟ್ಟ ಪುಟ್ಟ ಪಾಪು ಪುಟಾಣಿ ಪಾಪು', 'ಪುಟ್ಟನ ...
READ MORE