ಹೆಸರಾಂತ ಲೇಖಕ ಕೆದಂಬಾಡಿ ಜತ್ತಪ್ಪ ರೈ ಅವರು ಭಾವೀ ಜನಾಂಗಕ್ಕಾಗಿ ಎಂಬ ಉಪಶೀರ್ಷಿಕೆಯಡಿ ಮಕ್ಕಳಿಗಾಗಿ ಬರೆದ ಕೃತಿ-ಬೇಟೆಯ ಉರುಳು. ಈ ಕೃತಿಯು ಬೇಟೆ ಕುರಿತ ಉಪಯುಕ್ತ ಮಾಹಿತಿ ಒಳಗೊಂಡಿದೆ. ಚಿಕ್ಕ ಪುಟ್ಟ ಬೇಟೆಗಳ ಜಾಣ್ಮೆಯನ್ನು ಕಾಣಬಹುದು. ಬೇಟೆಯಾಡುವುದು ಇಂದು ಅಪರಾಧ. ಆದರೆ, ಅದು ಒಂದು ಕೌಶಲವೂ ಹೌದು. ಅದಕ್ಕೆ ಸಾಕಷ್ಟು ಸಿದ್ಧತೆ ಅಗತ್ಯವಿದೆ. ಈ ಸಂಬಂಧ, ಸಾಕ್ಷ್ಯಚಿತ್ರದ ದಾಖಲೆ ಇದು. ಬೇಟೆಯ ನೆನಪುಗಳು ಕೃತಿಯನ್ನು ಬರೆದು ಕರ್ನಾಟಕ ಅಕಾಡೆಮಿ ಪ್ರಶಸ್ತಿ ಪಡೆದಿರುವ ಲೇಖಕರು. ಬೇಟೆಯ ಕುರಿತ ತಮ್ಮ ಅನುಭವವನ್ನು ಇಲ್ಲಿ ರಸವತ್ತಾಗಿ ದಾಖಲಿಸಿ, ಸಂಶೋಧನೆ ಅಧ್ಯಯನಕ್ಕೆ ವಿಫುಲ ಸಾಧ್ಯತೆಗಳನ್ನು ಈ ಕೃತಿ ನೀಡುತ್ತದೆ. ಭಾವೀ ಜನಾಂಗವು ಈ ಕಲೆಯ ಕೌಶಲ ತಿಳಿದಿರಬೇಕು ಎಂಬ ಆಶಯದೊಂದಿಗೆ ಲೇಖಕರು ಇಲ್ಲಿ ಮಕ್ಕಳೀಗಾಗಿ ಕಥೆ ಹೇಳುವಂತೆ ವಿವರಿಸಿದ್ದಾರೆ.
ತುಳು ಸಾಹಿತ್ಯದ ಹೆಸರಾಂತ ಕವಿ ಸಾಹಿತಿ ಕೆದಂಬಾಡಿ ಜತ್ತಪ್ಪ ರೈ ಪುತ್ತೂರು ತಾಲ್ಲೂಕಿನ ಕೆದಂಬಾಡಿಯಲ್ಲಿನ 1916ರಲ್ಲಿ ಜನಿಸಿದರು. ತುಳು ಬರಹಗಳ ಮೂಲಕ ಸಾಹಿತ್ಯ ಕ್ಷೇತ್ರಕ್ಕೆ ತಮ್ಮ ಅಪಾರ ಸೇವೆ ಸಲ್ಲಿಸಿದವರು. ತುಳುತ್ತ ಪೋರ್ಲು ಅಜ್ಜಬಿರು (ನಾಟಕಗಳು), ಕುಜಿಲೆ ಪೂಜೆ (ಮೂಲ ಡಿ. ವಿ. ಜಿ. ಕನ್ನಡೊಗು ಕಣತ್ತಿನ ಉಮರ್ ಖಯ್ಯಾಮನ ರುಬಾಯತ್) ಅಸೆನಿಯಾಗೊ ಕಾಂತಗ ಜೋಗಿ (ಮೂಲ ಆಂಗ್ಲ ಕವಿ ಬ್ರೌನಿಂಗ್‌ನನ ದಿ ಪೈಪರ್ ಬೊಕ್ಕ ಕುವೆಂಪು ಅವರ ಕಿಂದರ ಜೋಗಿ). ಕೃಷಿಕರಾಗಿ, ಕೃಷಿಯ ರಕ್ಷಣೆಗಾಗಿ ಅನಿವಾರ್ಯವಾಗಿ ಬೇಟೆಗಾರರಾಗಿ, ತಮ್ಮ ಅರುವತ್ತನೆಯ ವಯೋಮಾನದಲ್ಲಿ ಅದೇ ಬೇಟೆಯ ನೆನಪುಗಳನ್ನು ಅಕ್ಷರಕ್ಕೆ ...
READ MORE