‘ಹಸ್ತಿನಾವತಿ’ ಮಕ್ಕಳಿಗಾಗಿ ರಚಿಸಿದ ಮಹಾಭಾರತದ ಮೊದಲನೆಯ ಭಾಗ. ಈ ಭಾಗದಲ್ಲಿ ಶಂತನುವಿನ ಪ್ರೇಮ ಪ್ರಸಂಗದಿಂದ ಕಥನವು ಪ್ರಾರಂಭವಾಗಿ ಪಾಂಡವರು ವನವಾಸಕ್ಕೆ ಹೊರಡುವವರೆಗಿನ ಕಥೆಯನ್ನು ಹೆಣೆಯಲಾಗಿದೆ. ಭಾಷೆ ಈವತ್ತಿನ ಆಡುನುಡಿಗೆ ಹತ್ತಿರದ್ದು. ಹಾಗಾಗಿ ಮಹಾಭಾರತ ಈವತ್ತಿನ ಕಥೆಯಾಗಿ ಭಾಷಿಕವಾಗಿಯೂ ತನ್ನನ್ನು ತೋರಿಸಿಕೊಳ್ಳುವುದು. ನಿಷ್ಠುರವಾದ ಜೀವನಪರ ನಿಲುವು ಕಥನದ ಉದ್ದಕ್ಕೂ ಕಂಡುಬರುವುದು. ಸಮಾಜಮುಖತೆ, ಶೋಷಿತ ವರ್ಗದ ಪರವಾದ ನಿಲುವು ಭಾರತ ಕಥೆಗೆ ಒಂದು ಹೊಸ ಪರಿವೇಷವನ್ನೇ ನೀಡಿವೆ. ಮಕ್ಕಳಿಗಾಗಿ ಭಾರತವನ್ನು ಪುನಾರಚಿಸುತ್ತಿರುವೆನೆಂಬ ಸ್ಪಷ್ಟ ನಿಲುವಿನಿಂದಲೇ ಕವಿಯು ಹೊರಟಿರುವುದರಿಂದ ಸರಳತೆ, ಸ್ಪಷ್ಟತೆ, ಸಂಕ್ಷಿಪ್ತತೆಯ ಮಾರ್ಗವನ್ನು ಕಾಣಬಹುದು. ಸಹಜಧರ್ಮದಲ್ಲಿ ಸಲೀಸಾಗಿ ಸಾಗುವ ಮನೋಹರವಾದ ಕಥನವು ಮಕ್ಕಳಿಗೆ ಮಾತ್ರವಲ್ಲ ಭಾರತ ಕಥೆಯಲ್ಲಿ ಆಸಕ್ತಿಯುಳ್ಳ ಹಿರಿಯರಿಗೂ ಪ್ರಿಯವಾಗುವುದರಲ್ಲಿ ಸಂಶಯವಿಲ್ಲ.
©2024 Book Brahma Private Limited.