ಪತ್ರಕರ್ತರೂ, ಲೇಖಕರೂ ಆದ ರಘುನಾಥ ಚ.ಹ ಅವರು ಬರೆದಿರುವ ’ಪುಟ್ಟಲಕ್ಷ್ಮಿ ಕಥೆಗಳು’ ಮಕ್ಕಳ ಕತೆಗಳ ಸಂಕಲನವಾಗಿದೆ.
ಎಣ್ಣೆಗೆಂಪು ಬಣ್ಣದ ಮೊಂಡು ಮೂಗಿನಪುಟ್ಟಲಕ್ಷ್ಮಿ ಅಪ್ಪ ಅಮ್ಮನ ಮುದ್ದಿನ ಮಗಳು ಮತ್ತು ಜಾಣೆ, ಧೈರ್ಯವಂತೆ. ಈಕೆಯನ್ನು ಕಂಡರೆ ಶಾಲೆಯಲ್ಲಿ ಎಲ್ಲರಿಗೂ ಅಚ್ಚುಮೆಚ್ಚು. ಸತ್ಯದ ಮೇಲಿನ ಪ್ರೀತಿಯಿಂದಾಗಿ ಅವಳಿಗೆ ಒಳ್ಳೆಯದನ್ನು ಮಾತನಾಡುವುದೆಂದರೆ ತುಂಬಾ ಇಷ್ಟ. ಪುಟ್ಟಲಕ್ಷ್ಮಿಯ ಕತೆಯ ಜೊತೆ ಸರಳವಾಗಿರುವ ಸುಂಯ್ ಟುಪಕ್ ದುಬಾಕು, ಕಾಗೆಮರಿಯ ಹೊಟ್ಟೆನೋವು, ಬುಸ್ ಬುಸ್ ಹೆದ್ದಾರಿ, ಗಾಂಧಿತಾತನ ಕಾಡಿನ ಮಕ್ಕಳು, ಕರೀಮಿಯ ಚುಕ್ಕಿಗಳ ಚೆಂಡಾಟ, ಮಳೆರಾಯನ ವಿರುದ್ದ ದೂರು, ಸೂರ್ಯನ ದೀಪ, ಚಾಕಲೇಟು ತಿಂದ ಟೊಮ್ಯಾಟೊ, ಮಂಚದ ಕಾಲು ಕಥೆ ಹೇಳಿತು ಮೊದಲಾದ ಕತೆಗಳಿವೆ.
ರಘುನಾಥ ಚ.ಹ. ಅವರು ಜನಿಸಿದ್ದು 1974 ನವೆಂಬರ್ 1ರಂದು. ಇವರ ಪೂರ್ಣ ಹೆಸರು ರಘುನಾಥ ಚನ್ನಿಗರಾಯಪ್ಪ ಹರಳಾಪುರ. ತುಮಕೂರು ಜಿಲ್ಲೆ ಶಿರಾ ತಾಲ್ಲೂಕಿನ ಹರಳಾಪುರದವರಾದ ಇವರು ಪತ್ರಿಕೋದ್ಯಮ ಹಾಗೂ ಕನ್ನಡ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪತ್ರಕರ್ತರಾಗಿ ವೃತ್ತಿ ಜೀವನ ಆರಂಭಿಸಿದ ಇವರು ಪ್ರಸ್ತುತ ಸುಧಾ ವಾರ ಪತ್ರಿಕೆಯ ಕಾರ್ಯ ನಿರ್ವಾಹಕ ಸಂಪಾದಕರಾಗಿ ಕೆಲಸ ಮಾಡುತ್ತಿದ್ದಾರೆ. ಹೊಳೆಯಲ್ಲಿ ಹರಿದ ನೀರು (ಕವಿತೆಗಳು), ಹೊರಗೂ ಮಳೆ ಒಳಗೂ ಮಳೆ (ಕಥೆಗಳು), ರಾಗಿಮುದ್ದೆ, (ಪ್ರಬಂಧ ಸಂಕಲನ), ಚೆಲ್ಲಾಪಿಲ್ಲಿ(ಲೇಖನಗಳು), ವ್ಯಂಗ್ಯಚಿತ್ರ ವಿಶ್ವರೂಪ (ಕಾರ್ಟೂನ್‌ಗಳ ಇತಿಹಾಸ), ಆರ್. ನಾಗೇಂದ್ರರಾವ್, ಡಾ.ದೇವಿ ಶೆಟ್ಟಿ, ಬಿಲ್‌ಗೇಟ್ಸ್, ...
READ MORE