ನಸಿರುದ್ದೀನನ ಕಥೆಗಳು

Author : ಪ್ರಕಾಶ್ ಕಂಬತ್ತಳ್ಳಿ

Pages 40

₹ 40.00




Published by: ಅಂಕಿತ ಪುಸ್ತಕ
Address: 53, ಗಾಂಧಿ ಬಜಾರ್ ಮುಖ್ಯರಸ್ತೆ, ಬಸವನಗುಡಿ , ಬೆಂಗಳೂರು -560004
Phone: 08026617100

Synopsys

ಪ್ರಕಾಶ್ ಕಂಬತ್ತಳ್ಳಿ ಅವರ ಮಕ್ಕಳ ಕತೆಗಳ ಸಂಗ್ರಹ ‘ನಸಿರುದ್ದೀನನ ಕಥೆಗಳು’. "ನಸಿರುದ್ದೀನನದು ವರ್ಣರಂಜಿತ ವ್ಯಕ್ತಿತ್ವ. ನಮ್ಮಲ್ಲಿ, ತೆನಾಲಿರಾಮನ ಕತೆಗಳು,ಬೀರ್ ಬಲ್ಲನ ಕತೆಗಳು ಪ್ರಸಿದ್ಧವಾಗಿರುವಂತೆ ನಸಿರುದ್ದೀನನ ಕತೆಗಳೂ ಪ್ರಸಿದ್ಧವಾಗಿವೆ. ಈತ ಒಬ್ಬ ಸಾಮಾನ್ಯ ಜೀವಿಯಾಗಿದ್ದ. ಬಡವರ ಪಕ್ಷಪಾತಿಯಾಗಿದ್ದ. ತನ್ನ ಕಾಲದ ಸಮಾಜವನ್ನು ಒರೆಗೆ ಹಚ್ಚಿ, ಅದನ್ನು ತಿದ್ದುವ ಕೆಲಸದಲ್ಲಿ ಹಿಂದೆ ಮುಂದೆ ನೋಡುತ್ತಿರಲಿಲ್ಲ. ತಪ್ಪು ಯಾರು ಮಾಡಿದ್ದರೂ ಸರಿ, ಖಂಡಿಸದೆ ಬಿಡುತ್ತಿರಲಿಲ್ಲ" - ಇಂತಹ ನಸಿರುದ್ದೀನನ ಕಥೆಗಳನ್ನು ಪ್ರಕಾಶ್ ಕಂಬತ್ತಳ್ಳಿಯವರು ಇಲ್ಲಿ ಸ್ವಾರಸ್ಯಪೂರ್ಣವಾಗಿ ಚಿತ್ರಿಸಿದ್ದಾರೆ.

About the Author

ಪ್ರಕಾಶ್ ಕಂಬತ್ತಳ್ಳಿ

ಅಂಕಿತ ಪುಸ್ತಕ ಪ್ರಕಾಶನದ ಪ್ರಕಾಶ್ ಕಂಬತ್ತಳ್ಳಿ ಮೂಲತಃ ದಾವಣಗೆರೆಯವರು. ಪ್ರಸ್ತುತ ಬೆಂಗಳೂರಿನಲ್ಲಿ ವಾಸವಿದ್ದಾರೆ. ಅವರಿಗೆ ರಂಗಭೂಮಿಯ ಕಡೆ ಒಲವು. ನಾಟಕಶಾಸ್ತ್ರದಲ್ಲಿ ಬಿ. ಎ ಹಾಗೂ ಕನ್ನಡದಲ್ಲಿ ಎಂ. ಎ ಪದವೀಧರರು. ಕಥೆಗಾರರು. ಅನುವಾದಕರು. ವಿವಿಧ ಸಂಸ್ಥೆಗಳಲ್ಲಿ ಸಂಪಾದಕರಾಗಿ ದುಡಿದಿದ್ದಾರೆ. 1995ರಲ್ಲಿ ಅಂಕಿತ ಪುಸ್ತಕ ಪ್ರಕಾಶನ ಸಂಸ್ಥೆಯನ್ನು ಸ್ಥಾಪಿಸಿ ಹೊಸ ಕಥೆಗಾರರಿಗೆ ಮತ್ತು ಪ್ರೇಕ್ಷಕರಿಗೆ ಪ್ರೋತ್ಸಾಹಿಸುತ್ತಿದ್ದಾರೆ. ಕರ್ನಾಟಕ ಪ್ರಕಾಶಕರ ಸಂಘದ ಅಧ್ಯಕ್ಷರಾಗಿದ್ದರು. ಕೆಲ ಕಾಲ ಶಿಕ್ಷಕರಾಗಿಯೂ ಕೆಲಸ ಮಾಡಿದ್ದಾರೆ.  ಕೃತಿಗಳು ; ಅನ್ವೇಷಕರು ಮತ್ತು ಇತರ ನಾಟಕಗಳು, ಕಂಪ್ಯೂಟರ್ ಸೇವಕ ಮತ್ತು ಇತರ ನಾಟಕಗಳು, ಮಕ್ಕಳಿಗಾಗಿ ಮತ್ತೆ ಹೇಳಿದ ನಸಿರುದ್ದೀನನ ಕತೆಗಳು, ...

READ MORE

Related Books