ಹಿರಿಯ ಬರಹಗಾರ, ಸಾಹಿತಿ ಎಂ.ಎಸ್. ಪುಟ್ಟಣ್ಣನವರ ಕೃತಿನೀತಿ ಚಿಂತಾಮಣಿ. ಮಕ್ಕಳು ಮುಗ್ದರು. ನಂತರ ಬೆಳೆಯುತ್ತಾ ಸುತ್ತಲ ಪರಿಸರದ ಪರಿಣಾಮ ಅವರ ಮನಸ್ಸು ಕಲುಷಿತಗೊಳ್ಳುತ್ತಾ ಹೋಗುತ್ತದೆ. ಉತ್ತಮ ಸಂಸ್ಕಾರ ಇದ್ದರೆ ಮಕ್ಕಳು ಉತ್ತಮ ಸಂಸ್ಕೃತಿ ಪಡೆಯುತ್ತಾರೆ. ಮನಸ್ಸು ಒಳಿತು ಕೆಡುಕು, ಪ್ರೀತಿ ದ್ವೇಷ, ನೋವು ನಲಿವು, ನೀತಿ ಅನೀತಿ ಮುಂತಾದವುಗಳಲ್ಲಿ ವ್ಯತ್ಯಾಸ ಕಾಣದೆ ಪರಿಶುಭ್ರವಾಗಿರುತ್ತದೆ. ಹೀಗೆ ಪರಿಶುಭ್ರವಾಗಿರುವಾಗ ಜೀವನದ ಉನ್ನತ ಮೌಲ್ಯಗಳನ್ನು ಮನಗಾಣಿಸಿಕೊಡಬಲ್ಲ ಕತೆಗಳನ್ನು ಹೇಳಿದರೆ ಆ ಕತೆಗಳ ಒಟ್ಟು ಆಶಯ ಅವರ ಮನಸ್ಸಿನಲ್ಲಿ ಸ್ಥಿರವಾಗಿ ಬೇರೂರುತ್ತದೆ. ಅವರು ಮೌಲ್ಯಗಳನ್ನು ಕಡೆಗಣಿಸದೆ ಸನ್ಮಾರ್ಗದಲ್ಲಿ ತಮ್ಮ ಜೀವನವನ್ನು ರೂಪಿಸಿಕೊಳ್ಳುವುದು ಸಾಧ್ಯವಾಗುತ್ತದೆ. ಮಕ್ಕಳಿಗೆ ಕಥಾರೂಪದಲ್ಲಿ ಮೌಲ್ಯಗಳನ್ನು ತಿಳಿಸಿಕೊಡುವ, ನೀತಿಯನ್ನು ಬೋಧಿಸುವ ಕೆಲವೇ ಕೃತಿಗಳಲ್ಲಿ ನೀತಿಚಿಂತಾಮಣಿಯೂ ಒಂದು.
ಸುಮಾರು 125 ವರ್ಷಗಳಷ್ಟು ಹಿಂದೆ ಅವರು ಮಕ್ಕಳಿಗೆಂದೇ ಪುರಾಣೇತಿಹಾಸಗಳ ಕತೆಗಳನ್ನು ಪುನರ್ರಚಿಸಿ ಸಿದ್ಧಪಡಿಸಿದ ಅಮೂಲ್ಯ ಕೃತಿಯೇ ನೀತಿಚಿಂತಾಮಣಿ (೧೮೮೪) 160ಕ್ಕೂ ಹೆಚ್ಚು ಕತೆಗಳಿರುವ ಈ ಪುಸ್ತಕದ ಭಾಷೆ ಮತ್ತು ಶೈಲಿ ಇಂದು ಸ್ವಲ್ಪಮಟ್ಟಿಗೆ ಹಳತೆನ್ನಿಸುವುದು ಸಹಜ. ಆದ್ದರಿಂದ ಈ ಪುಸ್ತಕದ ಭಾಷೆಯನ್ನು ಇವತ್ತಿನ ಕನ್ನಡಕ್ಕೆ ತಕ್ಕಂತೆ ಪರಿವರ್ತಿಸಿ ಪರಿಷ್ಕರಿಸಬೇಕೆಂದು ನಮ್ಮ ಕೆಲವು ವಿದ್ವಾಂಸರು ಅಭಿಪ್ರಾಯಪಟ್ಟರು. ಈಗ ನಮ್ಮ ಕೋರಿಕೆಯಂತೆ ಪ್ರಸಿದ್ಧ ಕತೆಗಾರ ಎಸ್ ದಿವಾಕರ್ ಈ ಪುಸ್ತಕವನ್ನು ಸೊಗಸಾಗಿ ಪರಿಷ್ಕರಿಸಿದ್ದಾರೆ.
©2024 Book Brahma Private Limited.