'ಚಿನ್ನಾರಿ ಮುತ್ತ' ಚಿತ್ರಕಥನವನ್ನು ಲೇಖಕ ಎಚ್. ಎಸ್. ವೆಂಕಟೇಶಮೂರ್ತಿ ಅವರು ರಚಿಸಿದ್ದಾರೆ. ಈ ಚಿತ್ರಕಥನದ ಚಿತ್ರಗಳನ್ನು ಪಾರ್ಥ ಸೇನಗುಪ್ತ ಮಾಡಿದ್ದಾರೆ. ಮಕ್ಕಳ ಮನಸ್ಸಿಗೆ ಬೇಗ ತಲುಪಬೇಕು ಮತ್ತು ಒದುವ ಉತ್ಸಾಹ ಬೆಳೆಯಬೇಕು ಎನ್ನುವ ನಿಟ್ಟಿನಲ್ಲಿ ಈ ಚಿತ್ರಕಥನವು ರಚಿತವಾಗಿದೆ. ಇಲ್ಲಿನ ಕಥೆಗಳು ನೀತಿ ಕಥೆಗಳಾಗಿವೆ ಮತ್ತು ಅಂದವಾದ ಚಿತ್ರಗಳನ್ನು ನೀಡಿರುವುದರಿಂದ ಮಕ್ಕಳಿಗೆ ಅರ್ಥೈಸಿಕೊಳ್ಳಲು ಸುಲಭವಾಗಿದೆ. ತನ್ನ ಪ್ರತಿಭೆ ಹಾಗೂ ಪ್ರಯತ್ನಗಳಿಂದ ಹಳ್ಳಿ ಹುಡುಗನೊಬ್ಬ ತಾರೆಯಾಗಿ ಬೆಳೆದ ಕತೆ ಇಲ್ಲಿದೆ.ಯಾರೇ ಆಗಲಿ ಬದುಕಿನಲ್ಲಿ ಶ್ರದ್ಧೆ ಹಾಗೂ ಮನಸಿದ್ದರೆ ಏನನ್ನೂ ಬೇಕಾದರೂ ಸಾಧಿಸಬಹುದು ಎನ್ನುವ ನೀತಿಯೊಂದಿಗೆ ಇಲ್ಲಿನ ಕಥೆಯು ಸಾರುತ್ತದೆ
ವೆಂಕಟೇಶ ಮೂರ್ತಿ ಅವರು ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲ್ಲೂಕಿನ ಹೊದಿಗೆರೆ ಎಂಬ ಸಣ್ಣ ಹಳ್ಳಿಯಲ್ಲಿ ಮಧ್ಯಮವರ್ಗದ ಕುಟುಂಬವೊಂದರಲ್ಲಿ 23-06-1944ರಲ್ಲಿ ಜನಿಸಿದರು. ಮೂವತ್ತು ವರ್ಷಗಳ ಕಾಲ ಗ್ರಾಮ್ಯಜೀವನ ನಡೆಸಿ ನಂತರ ಬೆಂಗಳೂರಿನ ಸೇಂಟ್ ಜೋಸೆಫ್ ವಾಣಿಜ್ಯ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ 1973ರಲ್ಲಿ ನೇಮಕಗೊಂಡರು. 2000 ರಲ್ಲಿ ನಿವೃತ್ತರಾದ ಅವರು ಈಗ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಪ್ರಾರಂಭದಲ್ಲಿ ಯಕ್ಷಗಾನ, ಬಯಲಾಟದಂಥ ರಂಗಪ್ರದರ್ಶನಗಳು ಇವರ ಮೇಲೆ ಗಾಢ ಪ್ರಭಾವ ಬೀರಿದವು. ಬಾಲ್ಯದಲ್ಲೇ ಕುಮಾರವ್ಯಾಸ, ಪುರಂದರ, ಲಕ್ಷ್ಮೀಶ ಮೊದಲಾದವರ ಕೃತಿಗಳ ನಿಕಟ ಸಂಪರ್ಕ ದೊರೆಯಿತು. ಮುಂದೆ ಕನ್ನಡ, ಸಂಸ್ಕೃತ, ಇಂಗ್ಲಿಷ್ ಸಾಹಿತ್ಯ ಪರಂಪರೆಯೊಂದಿಗೆ ನಡೆಸಲಾದ ...
READ MORE