ಮಲ್ಲಿಗೆ ಹುಡುಗ

Author : ಆನಂದ ವಿ. ಪಾಟೀಲ

Pages 24

₹ 25.00




Year of Publication: 2022
Published by: ಅಭಿನವ
Address: ಮೊದಲನೆಯ ಮುಖ್ಯರಸ್ತೆ, ಮಾರೇನಹಳ್ಳಿ, ವಿಜಯನಗರ, ಬೆಂಗಳೂರು-560040
Phone: 9448804905

Synopsys

ಲೇಖಕ ಆನಂದ ಪಾಟೀಲ ಅವರು ಬರೆದ ಮಕ್ಕಳ ಕಥನ ಕವನ ʻ ಮಲ್ಲಿಗೆ ಹುಡುಗʼ. ಪುಸ್ತಕದ ಬಗ್ಗೆ ಲೇಖಕರು ಹೇಳುವಂತೆ, “ ಮಲ್ಲಿಗೆ ಹುಡುಗ ದಿನವೂ ಬಂದು ಕಾಡಿಸಿ ಹೂವು ನೀಡುತ್ತಿದ್ದವನು ಇದ್ದಕಿದ್ದ ಹಾಗೆ ಒಂದು ದಿನ ಕಾಣೆಯಾದಾಗ ಓಣಿಯ ಜನರೆಲ್ಲ ಅದೇನೋ ಕಳೆದುಕೊಂಡಂತೆ ಕಳವಳ ಅನುಭವಿಸುವ ಪ್ರಸಂಗ ಇಲ್ಲಿನ ಕಥನ ಕಾವ್ಯದಲ್ಲಿದೆ. ಮಲ್ಲಿಗೆ ಹೂವು ಮಾರುವ ಹುಡುಗ ಕಾಣೆಯೇನೋ ಆದ, ಆದರೆ ಮಲ್ಲಿಗೆಯ ಹೂವುಗಳ ಘಮ್ ಎನ್ನುವ ವಾಸನೆಯ ಹಾಗೆ ನೆನಪನ್ನ ಅಳಿಸದಂತೆ ಬಿಟ್ಟುಹೋದ ಹುಡುಗನ ಸುತ್ತ ಸುಳಿದಾಡಲು, ಮಲ್ಲಿಗೆಯ ಕಂಪು ಮತ್ತೆ ಮತ್ತೆ ಹೀರತ್ತದೆ ಈ ಚಿತ್ರಹೊತ್ತಿಗೆ”. ಸಂತೋಶ್‌ ಸಶಿಹಿತ್ಲು ಅವರು ಪುಸ್ತಕದಲ್ಲಿ ಚಿತ್ರಗಳನ್ನು ರಚಿಸಿದ್ದಾರೆ.

About the Author

ಆನಂದ ವಿ. ಪಾಟೀಲ
(01 January 1955)

ಆನಂದ ವಿ. ಪಾಟೀಲ ಅವರು ಜನವರಿ 1-1955, ಧಾರವಾಡ ಜಿಲ್ಲೆಯ ನಾಗಲಿಂಗನ ನವಲಗುಂದದಲ್ಲಿ ಜನಿಸಿದರು. ವಿದ್ಯಾಭ್ಯಾಸ- ಘಟಪ್ರಭಾ, ನವಲಗುಂದ, ಗೋಕಾಕ, ಹಿಡಕಲ್ ಮತ್ತು ಧಾರವಾಡಗಳಲ್ಲಿ ಮುಗಿಸಿದ ಅವರು, ಜಾನಪದ ಕಲೆ ಮತ್ತು ವಿಧಿ ಕ್ರಿಯೆಗಳು' ಕುರಿತ ಪ್ರೌಢ ಪ್ರಬಂಧಕ್ಕೆ ಧಾರವಾಡ ವಿ.ವಿ.ಯಿಂದ ಡಾಕ್ಟರೇಟ್ ಪದವಿ ಪಡೆದಿದ್ದಾರೆ. ಸದ್ಯ ಆಕಾಶವಾಣಿಯಲ್ಲಿ ಉಪ ನಿರ್ದೇಶಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. “ಅಜ್ಜಿ ಮನೆ ಬಹಳ ದೂರ', 'ಹೂ', 'ಹಕ್ಕಿ ಪುಟಾಣಿ', 'ಹೂ ಅಂದ್ರ ಹೂ', “ಅಜ್ಜಿ ಬಿಡಿಕಾಳ್ ಬಿಡಿಕಾಳು', 'ಪಪ್ಪಿ ಕೊಟ್ಟು ಬಾಪೂ', 'ಹೃದ್ಧಿ', 'ಪುಟ್ಟ ಪುಟ್ಟ ಪಾಪು ಪುಟಾಣಿ ಪಾಪು', 'ಪುಟ್ಟನ ...

READ MORE

Related Books