ಲೇಖಕಿ ಕೆ.ಎಸ್. ಚೈತ್ರಾ ಅವರ ಮಕ್ಕಳ ಸಾಹಿತ್ಯ ಕೃತಿ ʻಮುನ್ನಿಗೆ ಮದುವೆʼ. ಚಿತ್ರ ಕಲಾವಿದ ಮುರಳೀಧರ ಎನ್.ಜಿ. ಅವರ ಬಣ್ಣ ಬಣ್ಣದ ಚಿತ್ರಗಳೊಂದಿಗೆ ಪುಟ್ಟ ಪುಟ್ಟ ಕತೆಗಳನ್ನು ಪುಸ್ತಕ ಹೊಂದಿದೆ. ನವಕರ್ನಾಟಕ ಪ್ರಕಾಶನದ ʻಕಿಂಡರ್ ಕಥಾʼ ಮಾಲಿಕೆಯ ಪುಸ್ತಕ. ಈ ಚಿತ್ರಪ್ರಧಾನ ಕತೆಗಳನ್ನು ನವಕರ್ನಾಟಕ ಪ್ರಕಾಶನದ ʻಕಿಂಡರ್ ಕಥಾʼ ಮಾಲಿಕೆಯಾಗಿ ಹೊರಬಂದಿದ್ದು, ಪ್ರಾಥಮಿಕ ಶಾಲಾಮಕ್ಕಳಿಗಾಗಿಯೇ ಪ್ರಕಟಮಾಡಿದ್ದಾರೆ. ಹಾಗಾಗಿ ಇಲ್ಲಿನ ಕತೆಗಳ ಕಥಾವಸ್ತುಗಳು ಸಾಮಾಜಿಕ ಹಾಗೂ ಪರಿಸರ ಸಮಸ್ಯೆಗಳಾಗಿದ್ದು, ಅವುಗಳನ್ನು ಮನರಂಜನೆಯ ಮೂಲಕ ಮಕ್ಕಳಿಗೆ ತಿಳಿಸುವ ಪ್ರಯತ್ನವೂ ಈ ಕೃತಿಯಲ್ಲಿ ನಡೆದಿದೆ.
ಉದಯೋನ್ಮುಖ ಬರಹಗಾರ್ತಿಯಾದ ಚೈತ್ರಾ ಕೆ.ಎಸ್ ಅವರು ಹುಟ್ಟಿದ್ದು 1974 ಜೂನ್ 27. ವೃತ್ತಿಯಲ್ಲಿ ದಂತವೈದ್ಯೆಯಾಗಿರುವ ಅವರು ವೈದ್ಯ ಸಾಹಿತ್ಯ ರಚನೆಗಳಲ್ಲಿ ಹೆಸರಾದವರು. ವ್ಯಕ್ತಿತ್ವ ವಿಕಸನದಲ್ಲೂ ತಮ್ಮ ಪ್ರತಿಭೆ ತೋರಿದ್ದಾರೆ. ವಿದ್ಯಾರ್ಥಿಯಾಗಿದ್ದನಿಂದಲೆ ತಮ್ಮ ಒಲವನ್ನು ಸಾಹಿತ್ಯದೆಡೆ ಕಂಡುಕೊಂಡವರು ಸಮಗ್ರ ಸಾಧನೆಗಾಗಿ ಅಂತರರಾಷ್ಷ್ರೀಯ ಅತ್ಯತ್ತಮ ವಿದ್ಯಾರ್ಥಿ ಪ್ರಶಸ್ತಿ ಪಡೆದಿದ್ದಾರೆ. ಆರೋಗ್ಯದ ನಗುವಿಗಾಗಿ, ಕುಶಲವೇ ಕ್ಷೇಮವೇ, ಯೋಗಕ್ಷೇಮ, ಪರಿಪೂರ್ಣ ವ್ಯಕ್ತಿತ್ವ ವ್ಯಕ್ತಿತ್ವ ವಿಕಸನ ಕೃತಿಗಳು. ಉದಯೋನ್ಮುಖ ಬರಹಗಾರ ಪ್ರಶಸ್ತಿ, 'ಕಥಾರಂಗಂ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ಅಂತರರಾಷ್ಟ್ರೀಯ ಮಹಿಳಾ ವರ್ಷದ ದತ್ತಿನಿಧಿ ಬಹುಮಾನ. ಶಿವಮೊಗ್ಗೆಯ ನಾವಿಕ ಪತ್ರಿಕೆಗೆ “ಅಮೇರಿಕಾ ಪತ್ರ” ಮಹಿಳಾ ...
READ MORE