’ಹಕ್ಕಿಗಳ ಸ್ವಾತಂತ್ಯ್ರೋತ್ಸವ’ ಮಕ್ಕಳ ಕತೆಗಳನ್ನು ಮಲೆನಾಡಿನ ಹಿನ್ನೆಲೆಯಲ್ಲಿ ಹೇಳುವ ಯತ್ನ. ಮಕ್ಕಳಿಗೆ ಇಷ್ಟವಾಗುವಂತಹ ರೂಪಕಗಳ ಮೂಲಕ ಅವರು ಮಾತನಾಡಲು ಯತ್ನಿಸಿದ್ದಾರೆ. ಅದರಲ್ಲಿಯೂ ಪಾಟೀಲರು ವರ್ಣಿಸುವ ಪ್ರಾಣಿಪ್ರಪಂಚ ಅನನ್ಯವಾದುದು.
ಹಿರಿಯ ಮಕ್ಕಳ ಸಾಹಿತಿ ಡಾ. ಆನಂದ ಪಾಟೀಲ ಅವರು 'ಅಮ್ಮ ಅಂದ್ರೆ ಅಷ್ಟಿಷ್ಟಲ್ಲ' ಎನ್ನುವ ಪದ್ಯಗಳ ಸಂಕಲನವನ್ನ ತಂದಿರುವ ವಿಜಯಕಾಂತ ಪಾಟೀಲರು ಮಕ್ಕಳಿಗಾಗಿ ರಚಿಸಿದ ಕತೆಗಳ ಸಂಕಲನ. ಅವರ ಈ ಮೊದಲಿನ ಪದ್ಯಗಳ ಕಟ್ಟಿನ ಮುಂದುವರಿಕೆಯಾಗಿಯೇ ಈ ಕತೆಗಳ ಸಂಕಲನ ನನಗೆ ಕಂಡಿದೆ. ವಿಜಯಕಾಂತ ತಮ್ಮದೇ ದೇನಿಸುವಿಕೆಯಲ್ಲಿ ಮಕ್ಕಳ ಲೋಕವನ್ನು ಕಂಡರಿಸಿರುವಂತೆ ಕಾಣುತ್ತದೆ. ಇಲ್ಲಿಯವರೆಗಿನ ಕನ್ನಡದ ಬರವಣಿಗೆಯ ಹಿನ್ನಲೆಗಿಂತ ಅದು ಅವರದೇ ಆದ ಅಂದಾಜಿನ ಆಕಾರಗಳದ್ದು. ಸಾಮಾಜಿಕ ಚಿಂತನೆಯ ದಾರಿಯಲ್ಲಿ ಅವರ ಒಟ್ಟು ಬರವಣಿಗೆಯ ಇನ್ನೊಂದು ಮುಖವಾಗಿ ಇದು ಕಂಡಿದೆ ಎಂತಲೂ ಬಹು ಸುಲಭವಾಗಿ ಅಂದುಕೊಳ್ಳಬಹುದು. ಹಾಗೆ ಇದು ತಮ್ಮ ಮುಂದಿರುವ ಮಕ್ಕಳಿಗಾಗಿ ತಮ್ಮೊಳಗಿನ ಮಾತುಗಳನ್ನ ಚಿಂತನೆಗಳನ್ನ ಕತೆಗಳ ಮೂಲಕವಾಗಿ ತೆರೆದುಕೊಂಡಂತೆ ಸಾಗುತ್ತವೆ. ಇಲ್ಲಿನ ಕತೆಗಳ ಹಂದರಗಳು, ಹಾಗಾಗಿ ಮಕ್ಕಳಿಗಾಗಿ ಅವರು ಆಸೆಯಿಂದಲೇ ತೊಡಗಿಕೊಂಡಿದ್ದರೂ ಅವರಿಗಾಗಿ ತಾವೇನನ್ನೂ ನೀಡಲು ಉತ್ಸುಕರಾಗಿದ್ದಾರೆ. ಕತೆಯ ಹಂದರಗಳು ಅದಕ್ಕೆ ಅನುಕೂಲವಾಗುವಂತೆ ಕಟ್ಟಿಕೊಂಡವುಗಳು. ಅದೊಂದು ಪ್ರಾಣಿಗಳನ್ನ ಬಳಸಿಕೊಂಡ ಕತೆಯಾಗಬಹುದು. ನಮ್ಮ ಜನಪದರ ಕತೆಯ ಮಾದರಿಯಾಗಬಹುದು. ಹೇಗೂ ಸಾಧ್ಯಮಾಡಿಕೊಂಡಿರುವುದು ಆಗಬಹುದು. ಹೀಗೆ ಇಲ್ಲಿನ ಮಕ್ಕಳ ಕತೆಗಳೆಲ್ಲ ಉದೇಶಪೂರ್ವಕವಾಗಿ ವಿಜಯಕಾಂತ ಮಕ್ಕಳಿಗೆ ತಾವು ಹೇಳಬೇಕಾದುದನ್ನ ಅಥವಾ ಮಕ್ಕಳಿಗೆ ಮುಟ್ಟಿಸಬೇಕು ಅಂದುಕೊಂಡಿರುವುದನ್ನು ಸಾಧ್ಯ ಮಾಡಿಕೊಂಡಿರುವುದೇ ಆಗಿದೆ. ಅದೇ ಅವರಿಗೆ ಬೇಕಾಗಿದೆ. ಹಾಗಾಗಿ ಹಾಗೆ ಬರೆದಿದ್ದಾರೆ, ಹಾಗೇ ವಿಜಯಕಾಂತ್ ತಮಗನಸಿದುದನ್ನ ದಿಟ್ಟವಾಗಿ ಬರೆದಿದ್ದಾರೆ ಎಂದುಕೊಳ್ಳುತ್ತೇನೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.
©2024 Book Brahma Private Limited.