ಲೇಖಕ ವೇಣುಗೋಪಾಲ ವಹ್ನಿ ಅವರು ಮಕ್ಕಳಿಗಾಗಿ ಬರೆದ ರಾಮಾಯಣವಿದು. ಕೃತಿಯ ಹೆಸರೇ ಸೂಚಿಸುವಂತೆ ಮಕ್ಕಳಿಗೆ ತಿಳಿಯುವಂತೆ ಸರಳವಾಗಿ ಬರೆಯಲಾಗಿದೆ. ರಾಮಾಯಣವು ಮಕ್ಕಳಲ್ಲಿ ಆದರ್ಶದ ಜೀವನ, ಅದರ ಮಹತ್ವ ಇಂತಹ ವಿಚಾರಗಳನ್ನು ತಿಳಿಸುತ್ತದೆ. ಸಂದರ್ಭಕ್ಕೆ ಅನುಸಾರವಾಗಿ ಚಿತ್ರಗಳನ್ನು ನೀಡಿದ್ದು, ಮಕ್ಕಳೀಗೆ ಮುದನೀಡುವಂತಿವೆ.
ವೇಣುಗೋಪಾಲ ವಹ್ನಿ ಅವರು ಮೂಲತಃ ಕೋಲಾರ ಜಿಲ್ಲೆಯ ಮಾಲೂರಿನವರು. ಅವರು ಕರ್ನಾಟಕ ಸಾಹಿತ್ಯ ಅಕಾಡೆಮಿ ಪುರಸ್ಕೃತರಾಗಿದ್ದಾರೆ. ಓದು, ಬರಹ, ಸಂಗೀತ, ಕ್ರೀಡೆಗಳ ವೀಕ್ಷಣೆ ಅವರ ಹವ್ಯಾಸಗಳಾಗಿವೆ. ಪ್ರಕಟಿತ ಕೃತಿಗಳು: ಪಳಯನ್ನರು ಮತ್ತು ದ್ರೌಪದಿ( ಸಂಶೋಧನೆ), ಸೆಲೆ ಬತ್ತಿದಾ ಜಲದ ಕಣ್ಣು, ಉಸಿರು ನೇಯುವ ದಾರ (ಕವನ ಸಂಕಲನ), ಧ್ವನಿ ಸಾಂದ್ರಿಕೆಗಳು: ಮಾಲೂರ ಮಹಮಾತೆ, ಮಾಲಿಕಾಪುರೀಶ್ವರಿ, ಕರಗ ಮಹಾಶಕ್ತಿಯ, ಕರಗ ಪರಮೇಶ್ವರಿ, ಯೋಗ ಮಾಯೆ, ನೆನಪುಗಳು, ಅಯ್ಯಪ್ಪನಾ ಭಜಿಸಿ, ಹರಿಹರಕುವರ ...
READ MORE