ವಿಜ್ಞಾನ ಸೃಷ್ಟಿಸಿರುವ ವಿಚಿತ್ರ ಯಂತ್ರ ರೊಬೋಟ್. ಮನುಷ್ಯನಂತೆ ಕೆಲಸ ಮಾಡುವ, ಯೋಚನೆ ಮಾಡುವ ವಸ್ತುಗಳು ಮಕ್ಕಳಿಗೆ ವಿಜ್ಞಾನದ ಸೃಷ್ಟಿಗಳೇ ಆಗಿವೆ. ಆದರೆ, ಈ ರೊಬೋಟ್ ಹೇಗೆ ಸೃಷ್ಟಿಯಾಯಿತು. ಅಂಶು ಮತ್ತು ರೊಬೋಟ್ ನಡುವಿನ ಸಂಬಂಧ, ಕೆಲಸದ ವೈಖರಿ ಹೇಗಿತ್ತು ಎಂಬುದನ್ನು ಇಲ್ಲಿಯ ಕತೆಯಲ್ಲಿ ಲೇಖಕ ಮತ್ತೂರು ಸುಬ್ಬಣ್ಣ ಕಟ್ಟಿಕೊಟ್ಟಿದ್ದಾರೆ.
ಮಕ್ಕಳ ಕತೆ, ಕವನ, ನಾಟಕ ರಚನೆಯಲ್ಲಿ ಹೆಸರಾಗಿರುವ ಮತ್ತೂರು ಸುಬ್ಬಣ್ಣ ಎಂತಲೇ ಪರಿಚಿತರಾಗಿರುವವರು ಹೊಸಹಳ್ಳಿ ಬಾಲಸುಬ್ರಹ್ಮಣ್ಯ. ಕೇಂದ್ರೀಯ ವಿದ್ಯಾಲಯದಲ್ಲಿ ಶಿಕ್ಷಕರಾಗಿ ಸುಮಾರು ಮೂರು ದಶಕಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿರುವ ಇವರು ಮಕ್ಕಳ ಕತೆ ಹೇಳುವುದರಲ್ಲಿಯೂ ಸಿದ್ಧರು. ಮಾಡಿದ್ದುಣ್ಣೋ ಮಾಮಣ್ಣ, ಒಂದು ಕುರಿಯ ಕತೆ, ಅಂಶು ಮತ್ತು ರಾಬೊಟ್, ಸಮಯಪ್ರಜ್ಞೆ, ಕಾಡಿನ ಕತೆಗಳು, ಕುಮಾ ಮತ್ತು ಇತರ ಮಕ್ಕಳ ಕತೆಗಳು, ತಮ್ಮಣ್ಣ ಮತ್ತು ಇರುವೆ ರಾಜಕುಮಾರಿ, ವಿಚಿತ್ರ ಸಲಹೆ, ಒಂದು ಕುರಿಯ ಕತೆ, ಮಕ್ಕಳ ಕಥಾಲೋಕ ಭಾಗ-1, ಒಂದು ಕುರಿಯ ಕತೆ, ಮಕ್ಕಳ ಕಥಾಲೋಕ-೧, ಹಣ್ಣಿನ ಕಳ್ಳ ...
READ MORE