`ಮೊಸಳೆ ಮತ್ತು ಮಿಂಚುಳ್ಳಿ’ ಈರಣ್ಣ ಬೆಂಗಾಲಿಯವರ ಮೊದಲ ಮಕ್ಕಳ ಕಥಾ ಸಂಕಲನದ ಮೂಲಕ ಭರವಸೆಯನ್ನು ಹುಟ್ಟಿಸಿದ್ದಾರೆ. ಇಲ್ಲಿನ ಎಲ್ಲಾ ಕಥೆಗಳು ಮನಸ್ಸಿಗೆ ಆಹ್ಲಾದ ನೀಡುತ್ತವೆ, ಹೊಸ ಚಿಂತನೆಗೆ ಹಚ್ಚುತ್ತವೆ. ಮಕ್ಕಳ ಸಾಹಿತ್ಯವನ್ನು ಇನ್ನೂ ಗಂಭೀರವಾಗಿ ಪರಿಗಣಿಸಿ ಚಿತ್ರಮಸ್ತಕ, ಮಕ್ಕಳ ನಾಟಕ, ಕಾದಂಬರಿಯತ್ತ ಚಿತ್ತವನ್ನು ಹಾಯಿಸಿ ಜಿಲ್ಲೆಯ ಮಕ್ಕಳ ಸಾಹಿತ್ಯದ ಕೊರೆತೆಯನ್ನು ನೀಗಿಸಲಿ ಎನ್ನುವ ಆಶಯ ನನ್ನದು ಎನ್ನುತ್ತಾರೆ ಗುಂಡುರಾವ್ ದೇಸಾಯಿ, ಮಸ್ಕಿ.
ಈರಣ್ಣ ಬೆಂಗಾಲಿ ಅವರು ರಾಯಚೂರು ನಗರದವರು. ಫ್ರಿಲಾನ್ಸರ್ ಆಗಿದ್ದಾರೆ. ಗಜಲ್, ಕಥೆ, ಕವನ, ಲೇಖನ, ವಚನ, ಹನಿಗವನ, ಹೈಕು, ಮಕ್ಕಳ ಕಥೆ, ಮಕ್ಕಳ ಕವನ, ಜೀವನ ಚರಿತ್ರೆ ಹೀಗೆ ಸಾಹಿತ್ಯದ ಮುಂತಾದ ಪ್ರಕಾರಗಳಲ್ಲಿ ಕೃಷಿ ಮಾಡಿರುತ್ತಾರೆ. ಇದುವರೆಗೆ ಇವರ ಹದಿನೈದಕ್ಕೂ ಹೆಚ್ಚಿನ ಕೃತಿಗಳು ಪ್ರಕಟವಾಗಿವೆ. 'ಅರಿವಿನ ಅಂಬರ ಅಂಬೇಡ್ಕರ್' ಗಜಲ್ ಕೃತಿಗೆ 2020ರಲ್ಲಿ ಗುಲಬರ್ಗಾ ವಿಶ್ವವಿದ್ಯಾಲಯದ ರಾಜ್ಯೋತ್ಸವ ಪ್ರಶಸ್ತಿ, 'ಅಪರೂಪದ ಕನ್ನಡ ಮೇಷ್ಟ್ರು' ಕೃತಿಗೆ 2021 ರಲ್ಲಿ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿ ಸೇರಿದಂತೆ ಇವರ ಇನ್ನಿತರ ಕೃತಿಗಳಿಗೂ ಪ್ರಶಸ್ತಿ ಲಭಿಸಿವೆ. ಹಂಪಿ ಉತ್ಸವ, ...
READ MORE