ನಕ್ಷತ್ರಗಳೆಂದು ನಾವು ಹೆಸರಿಸುವ ಈ ಮಿನುಗು ಚುಕ್ಕಿಗಳು ನಿಜಕ್ಕೂ ಏನು? ಇವೆಲ್ಲವೂ ಒಂದೇ ರೀತಿ ಇವೆಯೇ? ನಮ್ಮಿಂದ ಎಷ್ಟು ದೂರಗಳಲ್ಲಿವೆ? ಹೊಳೆಯುತ್ತಿರುವುದೇಕೆ? ಸಮಸ್ತ ಆಕಾಶಕಾಯಗಳ ನಡುವೆ ಎದ್ದುಕಾಣುವ ಸೂರ್ಯಚಂದ್ರರ ಅಂತಸ್ತೇನು? ಇನ್ನು ನೀವೇನಾ ದರೂ ಅಧಿಕ ಕುತೂಹಲ ತಳೆದಿರಾದರೆ, ಅಲ್ಲಿ ಆ ದೂರದಲ್ಲಿ, ನಮ್ಮ ಕಣ್ಣುಗಳಿಗೆ ಗೋಚರ ವಾಗದ ಇತರ ಕಾಯಗಳೇನಾದರೂ ಇರಬಹುದೇ ಎಂಬ ಊಹೆಗೆ ಕೂಡ ಅವಕಾಶವಿದೆ. ಈ ಎಲ್ಲಾ ಕೂತೂಹಲಗಳಿಗೆ ಉತ್ತರ ದೊರಕಿಸಲು ಈ ಕೃತಿಯಲ್ಲಿ ಪ್ರಯತ್ನಿಸಲಾಗಿದೆ.
ಜಿ.ಟಿ.ನಾರಾಯಣ ರಾವ್ ಅವರು ಪುತ್ತೂರಿನ ಸಮೀಪದ ಮರಿಕೆ ಗ್ರಾಮದಲ್ಲಿ 30-01-1926ರಂದು ಜನಿಸಿದರು. ಮದ್ರಾಸ್ ವಿಶ್ವವಿದ್ಯಾಲಯದಿಂದ ಗಣಿತದಲ್ಲಿ ಎಂ.ಎ. ಪದವಿ ಪಡೆದಿರುವ ಇವರು ಎನ್.ಸಿ.ಸಿ. ಅಧಿಕಾರಿಯಾಗಿಯೂ ಕರ್ತವ್ಯ ನಿರ್ವಹಿಸಿದ್ದಾರೆ. ಕರ್ನಾಟಕ ಸಂಗೀತ ಹಾಗೂ ಕನ್ನಡ ಅಭಿಜಾತ ವಾಙ್ಙಯ ಕುರಿತು ಅಪಾರ ಆಸಕ್ತಿ ಹೊಂದಿದ್ದಾರೆ, ಸರಕಾರಿ ಕಾಲೇಜುಗಳಲ್ಲಿ ಅಧ್ಯಾಪನ ಮತ್ತೆ ಮೈಸೂರು ವಿಶ್ವವಿದ್ಯಾಲಯದ ಕನ್ನಡ ವಿಶ್ವಕೋಶದ ವಿಜ್ಞಾನ ಸಂಪಾದಕರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ನೊಬೆಲ್ ಪ್ರಶಸ್ತಿ ಪುರಸ್ಕೃತರಾದ ಸಿ.ವಿ. ರಾಮನ್‌ರನ್ನು ಬೆಂಗಳೂರಿನಲ್ಲಿಯೂ, ಎಸ್. ಚಂದ್ರಶೇಖರ್‌ರನ್ನು ಚಿಕಾಗೋದಲ್ಲಿಯೂ ಭೇಟಿಮಾಡಿ ವೈಜ್ಞಾನಿಕ ಜೀವನ ಚರಿತ್ರೆಗಳನ್ನು ಬರೆದಿದ್ದಾರೆ. ಕನ್ನಡಕ್ಕೆ ವಿಪುಲ ಸ್ವತಂತ್ರ ವೈಜ್ಞಾನಿಕ ಕೃತಿಗಳನ್ನೂ, ಕೆಲವು ...
READ MORE