ಚಕ್ಕಡಿಗೊಂದು ಮೋಟಾರು

Author : ವಿರೂಪಾಕ್ಷಪ್ಪ ಕೋರಗಲ್‌

Pages 32

₹ 8.00




Year of Publication: 2002
Published by: ಭಾರತ ಜ್ಞಾನ ವಿಜ್ಞಾನ ಸಮಿತಿ
Address: 2ನೇ ಹಂತ, ಹಳೆಯ ಕೆಮಿಕಲ್ ಇಂಜಿನಿಯರ್ ಬಿಲ್ಡಿಂಗ್, ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಬೆಂಗಳೂರು- 5600022
Phone: 9481509699

Synopsys

ಲೇಖಕ ವಿರೂಪಾಕ್ಷಪ್ಪ ಕೋರಗಲ್‌ ಅವರ ಮಕ್ಕಳ ಸಾಹಿತ್ಯ ಕೃತಿ ʻಚಕ್ಕಡಿಗೊಂದು ಮೋಟಾರುʼ. ಪುಸ್ತಕದ ಕವನವನ್ನು ಕನ್ನಡಕ್ಕೆ ಅನುವಾದಿಸಲಾಗಿದೆ. ಅಜ್ಜಿ ಹೇಳುವ ಕತೆಯಿಂದ ಶುರುವಾಗುವ ಕವನ ಆದಿಕಾಲದ, ಆದಿಮಾನವರಿಂದ ಹಿಡಿದು ಇಂದಿನ ವರೆಗೆ ಮನುಷ್ಯನ ಜೀವನ ಕ್ರಮದಲ್ಲಿ ಆದ ಬದಲಾವಣೆಗಳನ್ನು ಹೇಳುತ್ತದೆ. ಈ ಮೂಲಕ ಮಕ್ಕಳಿಗೆ ಸಾಮಾಜಿಕ ಹಾಗೂ ಇತಿಹಾಸದ ಕುರಿತಾದ ವಿಚಾರಗಳನ್ನು ಸ್ವಾರಸ್ಯವಾಗಿ ಹೇಳಿಕೊಡುವ ಪ್ರಯತ್ನ ಈ ಕೃತಿಯಲ್ಲಿ ನಡೆದಿದೆ.

About the Author

ವಿರೂಪಾಕ್ಷಪ್ಪ ಕೋರಗಲ್‌

ಹಿರಿಯ ಸಾಹಿತಿ ವಿರೂಪಾಕ್ಷಪ್ಪ ಕೋರಗಲ್ ಅವರು ಕೊಪ್ಪಳ ಜಿಲ್ಲೆಯ ವದಗನಹಾಳ ಗ್ರಾಮದವರು. ಅಪ್ಪಟ ಮೊಘಲಾಯಿಯ ಗ್ರಾಮೀಣ ಪ್ರತಿಭೆ. ಎರಡನೆಯ ವಯಸ್ಸಿಗೆ ತಾಯಿಯನ್ನು ಕಳೆದುಕೊಂಡು, ತಂದೆಯ ಆಶ್ರಯದಲ್ಲಿ ಬೆಳೆದರು. ಗವಿಮಠದಲ್ಲಿ ಶಿಕ್ಷಣ ಪೂರೈಸಿ 30 ವರ್ಷಗಳಿಂದ ಜೈನ ಸಾಹಿತ್ಯದ ಬಗ್ಗೆ ಸಂಶೋಧನೆ ಮಾಡುತ್ತ ಬಂದಿದ್ದಾರೆ. ಓದುವಿಕೆ ಅವರ ಹವ್ಯಾಸ. ಸಣ್ಣ ಕತೆ ಅವರ ಆರಂಭದ ಸಾಹಿತ್ಯ ಪ್ರಕಾರ. ಕತೆ, ಪುರಾಣ ಕಾವ್ಯ ರಚನೆ, ಕಾದಂಬರಿ, ಮಕ್ಕಳ ಸಾಹಿತ್ಯ ಸೇರಿದಂತೆ ಸಾಹಿತ್ಯದ ಹಲವು ಪ್ರಕಾರಗಳಲ್ಲಿ ಕೆಲಸ ಮಾಡಿದ್ದಾರೆ. ಗಣಿತದ ಪ್ರಾಧ್ಯಾಪಕರಾಗಿ, ಗಣಿತದ ಸಂಶೋಧನೆಯನ್ನು ಕನ್ನಡದಲ್ಲಿ ಮಾಡಿದ್ದಾರೆ. ಕೃತಿಗಳು: ಮುತ್ತಿನ ಚಿಪ್ಪಿನ ಸೂತ್ರಗಳು, ಭೂ ಅಳತೆಯಕ್ಷೇತ್ರ ಗಣಿತ, ಕಾವೇರಿಯಿಂದ ಗೋದಾವರಿವರೆಗೆ, ರಾಜಾದಿತ್ಯ, ನಾಯಿ  ...

READ MORE

Related Books