ಕನ್ನಡದ ಮಕ್ಕಳ ಲೋಕಕ್ಕೆ ಯಾವಾಗಲೂ ಆಪ್ತವಾಗಿ ಹೊಸರೀತಿಯ ಬರಹ ಬರೆಯತ್ತಿರುವ ಬೀಗಾರರು ಮಕ್ಕಳಿಗೆ ಹಾಗೂ ತಮಗೆ ಹೊಸ ಓದಿನ ಪ್ರೀತಿಯ ಉಣಿಸನ್ನು ನೀಡಲು ಹೊಸ ಪುಸ್ತಕ ತಂದಿದ್ದಾರೆ. ಅವರ ಹೊಸ ಮಕ್ಕಳ ಕಥೆಗಳ ಸಂಕಲನ ಪುಟ್ಟಿಯೂ ಹಾರತ್ತಿದ್ದಳು… ಬಾಲ್ಯದೊಂದಿಗೆ ಅನುಸಂಧಾನಕ್ಕೆ ತೊಡಗಿದರೆ... ಅದು ಮತ್ತೆ ಮತ್ತೆ ಅನುಸಂಧಾನಕ್ಕೆ ಕರೆಯುತ್ತಲೇ ಇರುತ್ತದೆ. ಬಾಲ್ಯದ ನೆನಪಿನೊಂದಿಗೆ ಸಂಭ್ರಮಿಸಲು ಹಚ್ಚುವ ಈ ಅನುಸಂಧಾನ ನನ್ನಂಥವರಿಗೆ ಒಂದು ಪ್ರೀತಿಯ ಕೊಡುಗೆಯಾಗಿ ಖುಷಿ ನೀಡುತ್ತದೆ. ಶಾಲೆಗೆ ಹೋಗುವ ಯಾವುದೋ ಸಂದರ್ಭದಲ್ಲಿ ದಾರಿಯಲ್ಲಿ ಕಾಣುವ ಕಾಡು, ಜುಳು ಜುಳು ಹರಿಯುವ ನೀರು, ಬಸ್ ಎಂದು ಹಾರಿಹೋಗುವ ಮಂಗಟ್ಟೆ ನವಿಲಿನಂತಹ ದೊಡ್ಡ ಪಕ್ಷಿಗಳು, ದಿನವೂ ಪಾಠ ಹೇಳುತ್ತ ಗೆಳೆಯರಾಗಿ ಬಿಡುತ್ತಿದ್ದ ಶಿಕ್ಷಕರು, ಏನೇನೋ ಕಥೆ ಹೇಳುತ್ತ ಬೇರೆ ಊರಿಗೋ ಕಾಡಿಗೋ ಮುಂತಾಗಿ ನಾವಿನ್ನೂ ಕಾಣದ ಲೋಕಕ್ಕೆ ಕೊಂಡೊಯ್ಯುತ್ತಿದ್ದ ಅಜ್ಜ ಅಜ್ಜಿಯರು, ಕೊಟ್ಟಿಗೆ ತುಂಬಾ ದನ, ಮನೆ ಮುಂದಿನ ಗಿಡ ಮತ್ತು ಅದಕ್ಕೆ ಬರುವ ಚಿಟ್ಟೆ, ಹಕ್ಕಿಗಳ ಹಾರಾಟ, ಗೆಳೆಯರ ಒಡನಾಟ ಪ್ರೀತಿ, ಯಾರು ಯಾರಿಗೋ ಬರುವ ಸಂಕಟ, ಆಟ ಹೀಗೆ ಮುಗಿಯದ ಚಿತ್ರಗಳು ಕಣ್ಣಮುಂದೆ ಬರುತ್ತಲೇ ಇರುತ್ತವೆ. ಇದರಿಂದಾಗಿ ಬರೆಯುತ್ತಿದ್ದಂತೆ ಮತ್ತೆ ಮತ್ತೆ ಬರೆಯುತ್ತ ಮಕ್ಕಳೊಂದಿಗೆ ಖುಷಿಯಿಂದ ಒಂದಾಗಲು ಸಾಧ್ಯವಾಗುತ್ತದೆ ಎಂದು ಲೇಖಕರು ಹೇಳುತ್ತಾರೆ. ಮೇಲಿನ ವಸ್ತು ಉಳ್ಳ ಹದಿನೈದು ಕಥೆಗಳು ಈ ಪುಸ್ತಕದಲ್ಲಿದೆ. ಮಕ್ಕಳಿಗಾಗಿ ಬಾಲ್ಯದ ಕಣ್ಣೋಟದಿಂದ ಬರೆದುದಾದರೂ ಮಕ್ಕಳು ದೊಡ್ಡವರೆಲ್ಲೂ ಓದಬಹುದಾಗಿದೆ. ಇದರ ಒಂದರೆಡು ಕಥೆಗಳನನ್ನು ಪತ್ರಿಕೆಯಲ್ಲಿ ಪ್ರಕಟಿಸಿದಾಗ ಬಹಳ ಓದುಗರು ಮೆಚ್ಚಿಕೊಂಡಿದ್ದಾರೆ. ಪ್ರತಿಭಾನ್ವಿತ ಕಲಾವಿಧ ಸತೀಶ ಬಾಬು ಒಳಪುಟಗಳಲ್ಲಿ ಅಂದದ ಚಿತ್ರ ಬಿಡಿಸಿದ್ದಾರೆ. ಮುಖ ಪುಟ ಪ್ರಸಿದ್ಧ ಕಲಾವಿಧ ಸಂತೋಷ ಸಸಿಹಿತ್ಲು ಅವರದು.
ಕೃತಿಯ ಪರಿವಿಡಿಯಲ್ಲಿ ಚಿನ್ನಪ್ಪ ಸರ್, ಇರುವೆ ಮನೆಗಳಲ್ಲಿ, ಪುಟ್ಟಯೂ ಹಾರುತ್ತಿದ್ದಳು, ಹಕ್ಕಿ, ಪುಟ್ಟಿ ಮತ್ತು ಮರ, ನನಗೆ ಇದೆಲ್ಲಾ ಗೊತ್ತಾದದ್ದು, ಅಜ್ಜಿ ಕೆರೆಯ ಬದಿಯಲ್ಲಿ, ತಿಳಿಯುತ್ತಿಲ್ಲ, ಆಡಳು ಬಿಟ್ಟಾಗ, ಓಡಿ ಹೋಗಿದ್ದೇಕೆ, ನಗುತ್ತ ನಿಂತಿದ್ದರು, ಶಾಲೆಗೆ ಹೋಗಿದ್ದು ಆಗಿದ್ದು, ರಸ್ಮಿ ಮತ್ತು ಶಾಲೆ, ಹೀಗೊಬ್ಬ ಅಜ್ಜ, ನಾನು ಮತ್ತು ಜ್ಯುಪಿಟರ್, ಹಕ್ಕಿಮರಿ ಹೀಗೆ ಒಟ್ಟು 15ಕಥೆಗಲನ್ನು ಈ ಪುಸ್ತಕವು ಒಳಗೊಂಡಿದೆ.
'ಪುಟ್ಟಿಯೂ ಹಾರತ್ತಿದ್ದಳು' ಕೃತಿಯ ಕುರಿತು ಲೇಖಕ ತಮ್ಮಣ್ಣ ಬೀಗಾರ ಅವರ ಮಾತು.
©2024 Book Brahma Private Limited.