‘ಓದಿ ಕೇಳುವ ಕಥೆಗಳು’ ಕೃತಿಯು ಬಿ.ಕೆ. ತಿರುಮಲಮ್ಮ ಅವರ ಮಕ್ಕಳ ಕಥಾ ಸಂಕಲನವಾಗಿದೆ. ಮಕ್ಕಳೊಂದಿಗೆ ಪೋಷಕರು ಸೇರಿಕೊಂಡು ಓದಿ ಕತೆ ಹೇಳುವ ಪರಿಯನ್ನು ಇಲ್ಲಿ ಕಟ್ಟಿಕೊಡಲಾಗಿದೆ. ಕೃತಿಯ ಶೀರ್ಷಿಕೆಯಂತೆಯೇ ಮಕ್ಕಳೆಲ್ಲೆರನ್ನೂ ಒಂದೆಡೆ ಸೇರಿಸಿ ಹೇಳುವಂತಹ ಕತೆಗಳನ್ನು ಇಲ್ಲಿ ನೀಡಲಾಗಿದೆ. ಕನ್ನಡ ಸಾಹಿತ್ಯದಲ್ಲಿ ಮಕ್ಕಳ ಸಾಹಿತ್ಯಕ್ಕೆ ವಿಶೇಷವಾದ ಸ್ಥಾನವಿದೆ. ಮಕ್ಕಳ ಸಾಹಿತ್ಯವೂ ಭಿನ್ನವಾಗಿದ್ದು, ಮಕ್ಕಳಿಗೆ ತಲುಪುವ ಹಾಗೆ ಭಾಷಾ ಸಾಹಿತ್ಯವಿರಬೇಕು.
ಬಿ.ಕೆ.ತಿರುಮಲಮ್ಮ ಅವರು 22-11-22ರಲ್ಲಿ ಜನಿಸಿದರು. ಇದು ಸುಂದರ ಸಂಖ್ಯೆಯಲ್ಲವೇ? ಅವರು ಸಂಖ್ಯೆಗಳನ್ನು ಪ್ರೀತಿಸುತ್ತಿದ್ದರು. ಪ್ರತಿ ಮಗುವೂ ಶಾಲೆಗೆ ಹೋಗುವಂತಾಗಬೇಕು, ಸಂಖ್ಯೆಗಳು ಮತ್ತು ಪದಗಳ ಪ್ರಪಂಚದ ಪರಿಚಯ ಅವರಿಗೆ ಆಗಬೇಕು ಎಂದು ಬಯಸಿದ್ದರು. ಆದ್ದರಿಂದ ಅವರು 1953ರಲ್ಲಿ ಬೆಂಗಳೂರಿನ ಮಲ್ಲೇಶ್ವರದಲ್ಲಿ ಶಿಶು ವಿಹಾರವನ್ನು ಸ್ಥಾಪಿಸಿದರು. ಮಕ್ಕಳಿಗೆ ಗಣಿತ ಮತ್ತು ವಿಜ್ಞಾನವನ್ನು ಸುಲಭವಾಗಿ ಕಲಿಸಲು ಅನೇಕ ಸರಳ ಪದ್ಯಗಳನ್ನು ಬರೆದರು. ‘ಕಂದಾ ಅಕ್ಷರ ಕಲಿ’ ‘ಕನ್ನಡ ಓದುವೆಯಾ’ ‘ನಮ್ಮ ಮನೆ’ ‘ಓದಿ ಕೇಳುವ ಕತೆಗಳು’ ‘ಪುಟಾಣಿಗಳ ವೈಜ್ಞಾನಿಕ ಕತೆಗಳು’ ‘ನಮ್ಮ ಬೆಂಗಳೂರು ಮತ್ತು ಪುಣ್ಯಕೋಟಿ’ ಇವು ಅವರ ಕೆಲವು ಕವಿತೆಗಳು. ಇವುಗಳನ್ನು ...
READ MORE