ಗೀರ್ವಾಣಿಯವರ “ಚಂದಮಾಮನ ಭೂಮಿ ಟೂರ್ ಮತ್ತು ಇತರ ಕಥೆಗಳು” ಎಂಬ ಸಂಕಲನದಲ್ಲಿ ಮಕ್ಕಳಿಗಾಗಿ ರಚಿಸಿದ ಇಪ್ಪತ್ತೆರಡು ಕತೆಗಳಿವೆ. ಸಂಕಲನದಲ್ಲಿರುವ ಕಥಾಪಾತ್ರಗಳ ಆಯ್ಕೆಯಲ್ಲಿ, ಸನ್ನಿವೇಶಗಳ ನಿರ್ಮಾಣದಲ್ಲಿ, ಸಂದರ್ಭ ವರ್ಣನೆಯಲ್ಲಿ, ನಿರೂಪಣೆಯ ಶೈಲಿಯಲ್ಲಿ, ಆಡುಮಾತಿನ ಬಳಕೆಯಲ್ಲಿ ಮೂಡಿಸುವ ಭಾವನೆಗಳು ಅತ್ಯಂತ ನವೀನವಾಗಿವೆ.
ಗೀರ್ವಾಣಿಯವರು ಸಂಕಲನದ ಮೂಲಕ ಮಕ್ಕಳ ಕತೆಗಳಿಗೊಂದು ಹೊಸ ಮಾದರಿಯನ್ನು ಹಾಕಿಕೊಟ್ಟಿದ್ದಾರೆ. ಕತೆಗಳಲ್ಲಿ ಹೆಚ್ಚಿನವು ಬೇರೆ ಬೇರೆ ಪತ್ರಿಕೆಗಳಲ್ಲಿ ಬಂದಂತಹವು. ಈಗ ಇವೆಲ್ಲ ಒಂದು ಪುಸ್ತಕರೂಪದಲ್ಲಿ ಪ್ರಕಟವಾಗುತ್ತಿದೆ.
ಲೇಖಕಿ ಗೀರ್ವಾಣಿ ಅವರು ಮೂಲತಃ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಸಮೀಪದ ಹಾರೂಗಾರಿನವರು. ಸಾಹಿತ್ಯ, ಸಂಗೀತದ ವಾತಾವರಣದಲ್ಲಿ ಬೆಳೆದಿದ್ದು, ಶಿರಸಿಯಲ್ಲೇ ಬಿ.ಕಾಂ.ಪದವೀಧರರು. ಮೈಸೂರಿನಲ್ಲಿ ಪತ್ರಿಕೋದ್ಯಮ ಪದವಿ ಪೂರ್ಣಗೊಳಿಸಿದರು. ಸಂಯುಕ್ತ ಕರ್ನಾಟಕದಲ್ಲಿ ಉಪಸಂಪಾದಕಿಯಾಗಿ ಜೊತೆಗೆ, ಟಿ.ವಿ.ಧಾರಾವಾಹಿಗಳಿಗೆ ಚಿತ್ರಕಥೆ, ಸಂಭಾಷಣೆಗಳ ಬರವಣಿಗೆಯಲ್ಲಿ ತೊಡಗಿದ್ದಾರೆ. ನಮ್ಮಮ್ಮ ಶಾರದೆ, ಚಿ.ಸೌ.ಸಾವಿತ್ರಿ, ಅಂಜುಮಲ್ಲಿಗೆ, ಚಿತ್ರಲೇಖ, ಇದೇ ಪ್ರೀತಿ ಪ್ರೇಮ ಮುಂತಾದ ಟೆಲಿವಿಷನ್ ಧಾರಾವಾಹಿಗಳಲ್ಲಿ ಬರವಣಿಗೆ ಮಾಡಿದ್ದಾರೆ. ಕವನ, ಲೇಖನಗಳು ಪ್ರವಾಸ ಕಥನಗಳ ಬರಹಗಳು ಇವೆ. ವಿದ್ಯುನ್ಮಾನ ಮಾಧ್ಯಮದ ಪ್ರೊಡಕ್ಷನ್ ವಿಭಾಗದಲ್ಲೂ ಕೆಲಸ ಮಾಡಿದ್ದಾರೆ. ಕೃತಿಗಳು: ಚಂದಮಾಮನ ಭೂಮಿ ಟೂರ್ , ಅಂಕೋರ್ ವಾಟ್ (ಪ್ರವಾಸ ಕಥನ) ...
READ MORE