ಜಿಪುಣರ ಕಥೆಗಳು-ಲೇಖಕಿ ಶಾಂತಾ ಆರ್. ನಾಡಗೀರ, ಮೋಹನ ಡಿ. ದೇಶಪಾಂಡೆ ಹಾಗೂ ಆನಂದ ಆರ್ ದೇಶಪಾಂಡೆ ಅವರು ಮಕ್ಕಳಿಗಾಗಿ ಬರೆದ ಕೃತಿ ಇದು. ಮಕ್ಕಳ ಮನೋವಿಕಾಸಕ್ಕೆ ಇಂತಹ ಕಥೆಗಳು ಪೂರಕ. ತೀರಾ ಸರಳ ಭಾಷೆಯಲ್ಲಿ, ಮಕ್ಕಳ ಕಲ್ಪನಾ ಸಾಮರ್ಥ್ಯ ವೃದ್ಧಿಸುವ ರೀತಿಯಲ್ಲಿ ಕಥೆಗಳನ್ನು ರಚಿಸಲಾಗಿದೆ.
ಶಾಂತಾ ರಾ. ನಾಡಗೀರ ಸ್ನಾತಕೋತ್ತರ ಪದವೀಧರೆ. ಮಹಾರಾಷ್ಟ್ರದ ಸಾಂಗ್ಲಿಯವರು(ಜನನ: 02-12-1951). ತಂದೆ ಧೋಂಡೋರಾವ್ ದೇಶಪಾಂಡೆ, ತಾಯಿ- ಕಮಲಾಬಾಯಿ ದೇಶಪಾಂಡೆ. 'ಮುದ್ದು ಮಗುವಿಗೊಂದು ಅರ್ಥಪೂರ್ಣ ಹೆಸರು' 1992, ಊರ್ಮಿಳೆಯ ಸ್ವಗತ ಮತ್ತು ಇತರ ಕವನಗಳು (ಕವನ ಸಂಕಲನ-2006) ಕಮಲದ ಹೂಗಳು (ಸೋದರಿಯೊಂದಿಗೆ) ಶಿಶುಕಾವ್ಯ -2010 ರಲ್ಲಿ ಪ್ರಕಟಿತ ಕೃತಿಗಳು. 'ಊರ್ಮಿಳೆಯ ಸ್ವಗತ' (ಕಾವ್ಯ) ಕ.ಲೇ.ಸಂ. ಗುಡಿಬಂಡೆ ಪೂರ್ಣಿಮಾ ದತ್ತಿನಿಧಿ ಬಹುಮಾನ-2006 ಹಾಗೂ ಅತ್ಯುತ್ತಮ ಕೃತಿ ಪ್ರಶಸ್ತಿ -2006, ಕಯ್ಯಾರ ಕಿಯ್ಯಣ್ಣ ರೈ ಪ್ರಶಸ್ತಿ-2007, ಸಣ್ಣಕಥಾ ಸ್ಪರ್ಧೆ ದ್ವಿತೀಯ ಬಹುಮಾನ-2009, ಕನ್ನಡ ಸಂಘರ್ಷ ಸಮಿತಿ, ಅತ್ತಿಮಬ್ಬೆ ಕಾವ್ಯ ಪ್ರಶಸ್ತಿ -2009 ರಲ್ಲಿ ನೀಡಿ ಗೌರವಿಸಲಾಗಿದೆ. ...
READ MOREಜಿಪುಣರ ಕಥೆಗಳು : ಪುಸ್ತಕ ಪರಿಚಯ.