ಬಾಲ ಕಥಾ ಪಕ್ಷಿ ಪ್ರಪಂಚ

Author : ಪರಿಮಳಾ ರಾವ್ ಜಿ.ಆರ್

Pages 124

₹ 95.00




Year of Publication: 2020
Published by: ಸುಧಾ ಎಂಟರ್ ಪ್ರೈಸಸ್
Address: ನಂ. 761, 8ನ ಏಮೈನ್, 3ನೇ ಬ್ಲಾಕ್ ಕೋರಮಂಗಲ, ಬೆಂಗಳೂರು - 560 034

Synopsys

ಲೇಖಕಿ ಜಿ.ಆರ್. ಪರಿಮಳಾ ರಾವ್ ಅವರು ಮಕ್ಕಳಿಗಾಗಿ ಬರೆದ ಸಣ್ಣ ಕಥೆಗಳ ಸಂಗ್ರಹ ‘ಬಾಲ ಕಥಾ ಪಕ್ಷಿ ಪ್ರಪಂಚ’. ಈ ಕೃತಿಯಲ್ಲಿ ಜಯನಗರದ ವಿವೇಕಾನಂದ ಎಜುಕೇಷನ್ ಸೆಂಟರ್ ನ ಪ್ರಾಂಶುಪಾಲರು ಪದ್ಮಜ ಅವರು ಮುನ್ನುಡಿಯ ಮಾತುಗಳನ್ನು ಬರೆದಿದ್ದಾರೆ.

ಕೃತಿಯ ಪರಿವಿಡಿಯಲ್ಲಿ ಗುಬ್ಬಚ್ಚಿ ಜೋಡಿ, ಕಾಗೆ ಕಪ್ಪಾದರೇನು?, ಜಂಬದ ಚಿಟ್ಟೆ, ಸೋಂಬೇರಿ ಮೈನ, ಮರದ ಮಮತೆ, ಸತತ ಪ್ರಯತ್ನ, ಸ್ವಾರ್ಥಿ ಮರಕುಟಕ, ಪಕ್ಷಿಗಳು ಮತ್ತು ಮರಗಿಡಗಳು, ಪಾರಿವಾಳ ಕಲಿತ ಪಾಠ, ಪುಟ್ಟ ತುಂಟ ಹಕ್ಕಿ, ಮೋಸಗಾರ ಕೊಕ್ಕರೆ, ಜೇನಿನ ಗೂಡು, ಕಾಗೆಯ ಸಲಹೆ, ಪತ್ತೇದಾರಿ ಪಕ್ಷಿ, ಸಂಗೀತ ಮೇಳ, ಚಂಡಾಟ, ಬೇಟೆಗಾರ ಗಿಡುಗ, ಕಷ್ಟ ಸುಖ, ಕಾಗೆ ಹದ್ದಿನ ಕಾಳಗ ಸೇರಿ 52 ಕಥೆಗಿಳಿವೆ. ಅಲ್ಲದೆ ಬಾಲ ಕಥಾ ಪ್ರಕೃತಿ ಪ್ರಪಂಚ ಎಂಬ ಶೀರ್ಷಿಕೆಯಡಿ ಕರಿಮೋಡ, ಇರುವೆಗಳ ಅಪೀಲು, ಒಂದು ಮಳೆ ಹನಿಯ ಜಂಭ, ಪ್ರಣಯ ಪಕ್ಷಿಗಳು ಸೇರಿದಂತೆ 27 ಕಥೆಗಳಿವೆ.

About the Author

ಪರಿಮಳಾ ರಾವ್ ಜಿ.ಆರ್
(06 January 1941)

ಹನಿಗವನಗಳ ರಚನೆಯಲ್ಲಿ ಆಸಕ್ತಿಯುಳ್ಳ ಪರಿಮಳಾರಾವ್ ಜಿ. ಆರ್. ತಮ್ಮ ದಿನನಿತ್ಯದ ಅನುಭವಗಳ ಮನಸ್ಸಿನ ಮಾತುಗಳನ್ನು ಹನಿಗವನಗಳಿಗೆ ಇಳಿಸುತ್ತಾರೆ. 1941 ಜನವರಿ 06 ರಂದು ಆಂಧ್ರ ಪ್ರದೇಶದ ಕರ್ನೂಲ್‌ನಲ್ಲಿ ಜನಿಸಿದರು. ’ಮಂದಾರ ಮಾಲಿನಿ’ ಅವರ ಕವನ ಸಂಕಲನ. ’ಬರ್ಥ್ ಆಫ್ ಹೋಪ್, ಅಲೆಯ ಆಲಾಪ, ಅಂತರಂಗಯಾನ, ಸ್ವರ್ಣ ಸಂಪಿಗೆ’ ಹೈಕುಗಳ ಕೃತಿ. ’ಮಿನುಗು ದೀಪ ಹನಿಗವನಗಳು, ಋತುಗಾನ’ ಅವರ ಮತ್ತಿತರ ಕೃತಿಗಳು. ‘ಸ್ಪಿಂಗ್ ಅವಾರ್ಡ್, ಸರ್ ಎಮ್. ವಿಶ್ವೇಶ್ವರಯ್ಯ ಪ್ರತಿಷ್ಠಾನದಿಂದ ಕಾವ್ಯಶ್ರೀ ಪ್ರಶಸ್ತಿ, ಕುವೆಂಪು ಪ್ರಶಸ್ತಿ, ಗಾರ್ಡನ್ ಆಫ್ ಪೊಯಟ್’ ಮುಂತಾದ ಗೌರವ ಪುರಸ್ಕಾರಗಳು ಸಂದಿವೆ.  ...

READ MORE

Related Books