ಸಜ್ಜನರ ಸಂಗ ಮಕ್ಕಳ ಕಥಾ ಪುಸ್ತಕವನ್ನು ಲೇಖಕಿ ಸಂಧ್ಯಾ ಪೈ ಅವರು ರಚಿಸಿದ್ದಾರೆ. ಮುತ್ತಿನ ಸರ ಕಥಾಮಾಲಿಕೆಯ 5ನೇ ಸಂಕಲನ ಇದಾಗಿದ್ದು ಹಲವಾರು ವೈವಿಧ್ಯಮಯ ಮಕ್ಕಳ ಕತೆಗಳನ್ನು ಈ ಪುಸ್ತಕವು ಹೊಂದಿದೆ. ಮುಖ್ಯವಾಗಿ ಇಲ್ಲಿನ ಕಥೆಗಳು ಅದಕ್ಕೆ ಅನುಗುಣವಾದ ಚಿತ್ರಗಳನ್ನು ಹೊಂದಿದ್ದು ಮಕ್ಕಳಿಗೆ ಬಹುಬೇಗನೆ ಅರ್ಥವಾಗುತ್ತದೆ. ನೀತಿ ಕತೆಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡಿರುವ ಲೇಖಕಿ ಮಕ್ಕಳಿಗೆ ಅಕರ್ಷಕವಾಗುವ ರೀತಿಯಲ್ಲಿ ಇಲ್ಲಿ ತಮ್ಮ ಕಥೆಗಳನ್ನು ಹೆಣೆದಿದ್ದಾರೆ. ಸಂಧ್ಯಾಮಾಮಿ ಹೇಳಿದ ಪುಟಾಣಿ ಕಥೆಗಳು ಎಂಬ ಮುಖಪುಟ ಬರಹದೊಂದಿಗೆ ಈ ಪುಸ್ತಕವು ಮಕ್ಕಳಿಗೆ ಹೆಚ್ಚು ಆಪ್ತವಾಗುತ್ತದೆ.
ಮಣಿಪಾಲ್ ಮೀಡಿಯಾ ಎಂಟರ್‌ಟೈನ್‌ಮೆಂಟ್ ನೆಟ್‌ವರ್ಕ್ ವಿಭಾಗದ ಗೌರವ ನಿರ್ದೇಶಕಿಯಾಗಿರುವ ಸಂಧ್ಯಾ ಎಸ್. ಪೈ ಅವರು ಪತ್ರಿಕೋದ್ಯಮಿ, ಲೇಖಕಿ. ತರಂಗ ವಾರಪತ್ರಿಕೆ ಸೇರಿದಂತೆ ಮಣಿಪಾಲ್ ಮೀಡಿಯಾ ನೆಟ್‌ವರ್ಕ್‌ನ ನಾಲ್ಕು ಪತ್ರಿಕೆಗಳಿಗೆ ಸಂಪಾದಕಿ ಆಗಿದ್ದಾರೆ. ಸಂಧ್ಯಾ ಅವರು ಜನಿಸಿದ್ದು ಚಿಕ್ಕಮಗಳೂರಿನಲ್ಲಿ 1947ರ ಫೆಬ್ರುವರಿ 26ರಂದು. ತಂದೆ ಬಿ. ನಾರಾಯಣ ಬಾಳಿಗಾ ಹಾಗೂ ತಾಯಿ ಸುಮಿತ್ರಾದೇವಿ. ಇದು ಈಜಿಪ್ಟ್ ಇದು ಇಸ್ರೇಲ್ (ಪ್ರವಾಸ ಕಥನ), ಸಂಪಾದಕೀಯ ಅಂಕಣಗಳಾದ ’ಪ್ರಿಯ ಓದುಗರೇ’ ಬರಹಗಳ 10 ಸಂಪುಟಗಳು ಪ್ರಕಟವಾಗಿವೆ. ಕೊಂಕಣಿ ರಾಂದಪ (ಕನ್ನಡ, ಇಂಗ್ಲಿಷ್ ಆವೃತ್ತಿ). ಯಕ್ಷಪ್ರಶ್ನೆ, ಪರಂಪರೆಯ ಪುಟಗಳಿಂದ (ಭಾರತೀಯ ಧಾರ್ಮಿಕ-ಸಾಂಸ್ಕೃತಿಕ ಮೌಲ್ಯಗಳ ...
READ MORE