’ಮಹಾಜಿಪುಣ ಮೈದಾಸ’ ಚಂದ್ರಕಾಂತ ಕರದಳ್ಳಿಯವರು ಮಕ್ಕಳಿಗಾಗಿ ಬರೆದಿರುವ ಕಿರು ಕಾದಂಬರಿ. ಸಂಪತ್ತಿನ ಬಗ್ಗೆ ದುರಾಸೆ ಹೊಂದಿದವರಿಗೆ ಮತ್ತು ಅದನ್ನು ಸಂಗ್ರಹಿಸಿ ಇಡುವವರಿಗೆ ಜೀವನದಲ್ಲಿ ಅದೊಂದೇ ಪರಮ ಗುರಿಯಾಗಿರುತ್ತದೆ. ಮೈದಾಸ ಅಂಥ ಮನಸ್ಥಿತಿಯನ್ನು ಪತಿಬಿಂಬಿಸುವ ರೂಪಕ. ಆತನು ತನ್ನ ದುರಾಸೆಯಿಂದಾಗಿ, ತಾನು ಅತಿಯಾಗಿ ಪ್ರೀತಿಸುವ ಮಗಳನ್ನೂ ಕಳೆದುಕೊಳ್ಳುವ ಸ್ಥಿತಿಗೆ ಬರುತ್ತಾನೆ. ಕಡೆಯಲ್ಲಿ ಆತನಿಗೆ ತನ್ನ ತಪ್ಪಿನ ಅರಿವಾಗುತ್ತದೆ. ದುರಾಸೆಯನ್ನು ಬಿಟ್ಟು ಬೇರೆ ಮನುಷ್ಯರಂತೆ ತಾನೂ ಬದುಕಲಾರಂಭಿಸುತ್ತಾನೆ. ಚಂದ್ರಕಾಂತ ಕರದಳ್ಳಿಯವರು ಇಂಗ್ಲೀಷಿನಲ್ಲಿ ಜನಪ್ರಿಯವಾಗಿರುವ ಈ ಕತೆಯನ್ನು ಕನ್ನಡದಲ್ಲಿ ಅತ್ಯಂತ ಸರಳವಾಗಿ, ಮಕ್ಕಳಿಗೆ ಅರ್ಥವಾಗುವ ಶೈಲಿಯಲ್ಲಿ ನಿರೂಪಿಸಿದ್ದಾರೆ.
ಮಕ್ಕಳ ಸಾಹಿತ್ಯದಲ್ಲಿ ಗಣನೀಯ ಸಾಧನೆ ಮಾಡಿರುವ ಚಂದ್ರಕಾಂತ ಕರದಳ್ಳಿಯವರು ಯಾದಗಿರಿ ಜಿಲ್ಲೆಯ ಶಹಾಪುರದವರು. 1952ರ ಆಗಸ್ಟ್ 25ರಂದು ಜನಿಸಿದರು. ತಂದೆ ರಾಚಯ್ಯಸ್ವಾಮಿ ಕರದಳ್ಳಿ. ತಾಯಿ ಮುರಿಗೆಮ್ಮ. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ (1985) ಪದವಿ ಪಡೆದ ಅವರು ಮೈಸೂರು ವಿಶ್ವವಿದ್ಯಾನಿಲಯದಿಂದ ಬಿ.ಎಡ್. ಪದವಿ ಗಳಿಸಿದರು. ಪ್ರಾಥಮಿಕ ಶಾಲಾ ಶಿಕ್ಷಕರಾಗಿ ವೃತ್ತಿ ಜೀವನ ಆರಂಭಿಸಿದ ಅವರು ನಂತರ ಪ್ರೌಢಶಾಲಾ ಶಿಕ್ಷಕರಾದರು. 2012ರಲ್ಲಿ ನಿವೃತ್ತರಾದರು. ಮಕ್ಕಳ ಕತೆ, ಕಾದಂಬರಿ, ಕಾವ್ಯ ರಚಿಸಿರುವ ಕರದಳ್ಳಿ ಅವರಿಗೆ ಕೇಂದ್ರ ಸರ್ಕಾರದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಸಂದಿದೆ. ಯಾದಗಿರಿ ಜಿಲ್ಲಾ ಸಾಹಿತ್ಯ ಸಮ್ಮೇಳನದ ...
READ MORE