ಕೈಲಾಶ್ ತಿಪಟೂರು ಅವರು ರಚಿಸಿದ ಮಕ್ಕಳ ಕತೆ-ಚಿತ್ರ ಪುಸ್ತಕ ಟೊಮಾಟೋ ಫಿಶ್. ಮಕ್ಕಳ ನಡುವೆ ನಡೆಯುವ ಈ ಕತೆ ಹಾಸ್ಯದ ಪದರದ ಮೇಲೆ ಇದೆ. ಸಹಬಾಳ್ವೆ, ಸಹಾನುಭೂತಿಯನ್ನು ಪಸರಿಸುವ ಪುಸ್ತಕವಾಗಿ ಹೊರಹೊಮ್ಮಿದೆ.ಕಲಾವಿದೆ ವನಿತಾ ರವರು ಚಿತ್ರಗಳನ್ನು ಬಟ್ಟೆಯಲ್ಲಿ ರಚಿಸಿದ್ದಾರೆ.
ಕೈಲಾಶ್ ತಿಪಟೂರು ಅವರು ನೀನಾಸಂ ಪದವೀಧರರು. ಸದ್ಯ ಸಿನಿಮಾ, ಕಿರುತೆರೆಯಲ್ಲಿ ನಟನೆ ಮಾಡುತ್ತಿದ್ದಾರೆ. ಎಲ್ಲರ ಪುಸ್ತಕದ ಸಹ ಸಂಸ್ಥಾಪಕರಾದ ಇವರು ಕನ್ನಡದ ಮಕ್ಕಳಿಗೆ ತಾಯ್ನುಡಿಯಲ್ಲಿ ಪುಸ್ತಕವನ್ನು ಹೆಚ್ಚೆಚ್ಚು ಹೊರತರುವ ಪ್ರಯತ್ನದಲ್ಲಿ ಇದ್ದಾರೆ. ...
READ MORE