‘ಚಿಟ್ಟೆ ದುಂಬಿಯ ಚಿತ್ತಾರ’ ಕೃತಿಯು ಹೆಚ್. ವಿ.ಮೀನಾ ಅವರ ಕತಾಸಂಕಲನವಾಗಿದೆ. ಕೃತಿಯ ಕುರಿತು ಬೇಲೂರು ರಾಮಮೂರ್ತಿ ಅವರು, ಈ ಸಂಗ್ರಹದಲ್ಲಿ ಮಕ್ಕಳಿಗೆ ಆಕರ್ಷಣೀಯವಾಗುವ ಪ್ರಾಣಿಗಳ ಕಥೆಗಳಿವೆ. ಮಕ್ಕಳ ಮನೋಭಾವಕ್ಕೆ ಒಳಗಾಗುವಂತಹ ದೊಡ್ಡವರ ಕಥೆಗಳು ಇಲ್ಲಿವೆ. ಮಕ್ಕಳೇ ಕಥಾ ಪಾತ್ರಗಳಾದ ಕಥೆಗಳೂ ಇವೆ. ಹೀಗೆ ಇಲ್ಲಿರುವ 15 ಕಥೆಗಳೂ ತುಂಬಾ ಹೊಸದು ಎನಿಸುತ್ತದೆ. ವಾಸ್ತವವಾಗಿ, ಮಕ್ಕಳ ಪುಸ್ತಕ ಎಂದರೆ - ಅದಕ್ಕೇ ಒಂದು ಭಾಷೆ ಬೇಕಾಗುತ್ತದೆ. ಕಥೆಗಳನ್ನು ನೇರವಾಗಿ ಹೇಳಬೇಕು. ಅಲ್ಲಿ ಕಥಾನಕವಿರಬೇಕು. ಕುತೂಹಲವಿರಬೇಕು, ಮಾತುಗಳು ಸರಳವೂ ಸುಂದರವೂ ಆಗಿರಬೇಕು. ಈ ವಿಷಯಗಳಲ್ಲಿ ಲೇಖಕಿ ಗೆದ್ದಿದ್ದಾರೆ ಎಂದು ಹೇಳಬಹುದು. ಒಂದೊಂದು ಕಥೆಯೂ ಓದಿಸಿಕೊಂಡು ಹೋಗುವುದರಲ್ಲಿ ಯಶಸ್ವಿಯಾಗಿದೆ ಎಂದರೆ ಅದರಲ್ಲಿರುವ ಕುತೂಹಲವೂ ಒಂದು ಕಾರಣ. ಮಾನಸಿ ಮತ್ತು ಕಾಕಣ್ಣ, ಗಿಡುಗ ಪತಂಗದ ತರ್ಕ, ಚಿಟ್ಟೆ ದುಂಬಿಯ ಚಿತ್ತಾರ, ಪರಿಸರ ಭಂಡಾರ, ನನ್ನ ನವಿಲೇ, ಮಾನವ ಸೃಷ್ಟಿ-ಸಿಂಹರಾಜನ ದೃಷ್ಟಿ, ಹಾವು ಅಡಿಗೆ ಮನೆಗೆ ಬಂದದ್ದೇಕೆ ಎನ್ನುವ ಕಥೆಗಳು ವಿಶೇಷವಾಗಿವೆ ಎನಿಸುತ್ತದೆ. ಒಟ್ಟಾರೆ ಹೇಳುವುದಾದರೆ, ಚಿಟ್ಟೆ-ದುಂಬಿಯ ಚಿತ್ತಾರ ತಲೆಬರಹ ಎಷ್ಟು ಆಕರ್ಷಣೀಯವಾಗಿದೆಯೋ, ಒಳಗಿರುವ ಕಥೆಗಳೂ ಅಷ್ಟೇ ಆಕರ್ಷಣೀಯವಾಗಿವೆ. ಮಕ್ಕಳ ಮನಸ್ಸಿಗೆ ನಾಟುವಂತಹ ಭಾಷೆ ಇದೆ. ಕಥೆಗಳನ್ನು ಓದುವಾಗ ಎಲ್ಲೂ ಗೊಂದಲ ಎನಿಸುವುದಲ್ಲ’ ಎಂದಿದ್ದಾರೆ. ಕೃತಿಯಲ್ಲಿ15 ಅಧ್ಯಾಯಗಳಿದ್ದು, ನಳಿನಿ, ಮಾನಸಿ ಮತ್ತು ಕಾರಣ, ಅಕ್ಷರಸ್ಥ ಜಗದೀಶ, ಗಿಡುಗ ಪತಂಗದ ತರ್ಕ, ರಾಜೇಶನೆಂಬ ಮಾಣಿಕ್ಯ, ಮಾಲಿಕ ಮತ್ತು ರಾಮನ ಸ್ವಾರ್ಥ, ಚಿಟ್ಟೆ-ದುಂಬಿಯ ಚಿತ್ತಾರ - ಪರಿಸರದ ಬಂಢಾರ, ಓ ನನ್ನ ನವಿಲೇ, ಮಾನವನ ಸೃಷ್ಟಿ- ಸಿಂಹರಾಜನ ದೃಷ್ಟಿ 10. ಮಾಧವನಿಂದ ಕಲಿತ ಪಾಠ, ರಾಗಿಗೆ ಗೋಧಿಯ ಮೇಲೇಕೆ ಬೇಸರ..?, ಅಪ್ಪ ಒಂದು ಸಂತೋಷದ ವಿಷಯ, ಹಾವು ಅಡುಗೆ ಮನೆಗೆ ಬಂದದ್ದೇಕೆ..?, ಇಬ್ಬರೂ ಒಂದೇ, ರಕ್ತದ ಆಟ ಚಂದವೇ ಕಥೆಗಳನ್ನು ಒಳಗೊಂಡಿವೆ.
©2024 Book Brahma Private Limited.