'ಸಿಂಹದ ನೀತಿ ಮತ್ತು ಇತರೆ ಕಥೆಗಳು' ನೀತಿಕಥಾ ಸಂಕಲನದಲ್ಲಿ ದೂರದ ಬೆಂಗಳೂರಿನ ಮಕ್ಕಳ ಸಾಹಿತಿ ಪ್ರೀತಿ ಭರತರವರ ಕಥೆಗಳು ಈ ಸಂಕಲನದಲ್ಲಿ ಇವೆ, ಈ ಇಬ್ಬರು ಸಾಹಿತಿಗಳು ನ್ಯಾಯಯುವಾಗಿ ಕಥೆಗೆ ತಕ್ಕಂತೆ, ಪಾತ್ರ, ತ್ಯಾಗ, ಪ್ರೀತಿ, ನೀತಿಗಳನ್ನು ಬಿತ್ತರಿಸಿದ್ದಾರೆ. ತಯಬಅಲಿ. ಹೊಂಬಳರವರ ಕರಿ ಇರುವೆಯ ನೀತಿ ಕಥೆಯಲ್ಲಿ ಇರುವೆಯು ಹಂಚಿ ತಿನ್ನುವ ಗುಣದ ನೀತಿಯನ್ನು ನಾವು ಮನುಷ್ಯರು ನೋಡಿ ಕಲಿಯಲೇಬೇಕಾದಂತಹ ಸನ್ನಿವೇಶ ಇದೆ, ಹಾಗೆಯೇ ಆನೆಮರಿಗಳ ವಿಕಾಸದ ಕಥೆಯಲ್ಲಿ ದುಷ್ಟರಿಗೆ ಬೇಡದ ಸಮಯದಲ್ಲಿ ಉಪದೇಶಿಸಿದರೆ ನಮಗಾಗುವ ಅಪಾಯವನ್ನು ಸವಿಸ್ತಾರವಾಗಿ ಮೂಡಿಬಂದಿದೆ, ಸದ್ಗುಣಗಳ ಕಥೆಯಲ್ಲಿ ಇಂದಿನ ಮಕ್ಕಳಿಗೆ ಸಣ್ಣವರಿದ್ದಾಗ ನ್ಯಾಯ, ನೀತಿ, ಧರ್ಮದ ಉಪದೇಶಗಳನ್ನು ಬೋಧಿಸಬೇಕು ಎನ್ನುವ ಲೇಖಕರ ವಾದ ಸೂಕ್ತವಾಗಿದೆ. ನಾಯಿಮರಿಗಳು ಮತ್ತು ಹಂದಿಯ ಕಥೆಯಲ್ಲಂತೂ ಎದುರಾಳಿ ಎಷ್ಟೇ ಬಲಶಾಲಿಯಾಗಿದ್ದರೂ ನಾವು ಹೇದರದೆ ಎದುರಿಸಿದರೆ ಜಯ ನಮಗೆ ಎನ್ನುವ ಕಥೆ. ಅದೇ ರೀತಿ ಪಂಡಿತರ ಸೋಲು ಕಥೆಯಲ್ಲಿ ಕ್ಷಣಿಕ ಆಸೆಯ ಫಲ, ಸುಳ್ಳಿನ ಮಹಿಮೆ, ಗುಣವಂತರು, ನಾಯಿಮರಿಗಳ ಕನಸು, ಸಂಜಯನ ಜಾಣತನ, ಮಕ್ಕಳ ಅಮ್ಮ, ಯೋಗೇಶನ ಉಪಾಯ, ಕೆಂಪರಸ ಮತ್ತು ಕೋಗಿಲೆ, ನಾಗರ ಹಾವೆ, ಕಮಲಾ ವಿಮಲಾ, ಸತ್ಯದ ಹಾದಿಯಲ್ಲಿರುವ ಪ್ರೀತಿ, ನೀತಿ, ತ್ಯಾಗ, ನೋವು, ನಲಿವುಗಳನ್ನು ನೋಡುತ್ತ ಓದಿದರೆ ಕಥೆಗಳು ಹೇಗೆ ಮುಗಿದಿವ ಎನ್ನುವುದೆ ಗೊತ್ತಾಗುವುದಿಲ್ಲ. ನಾನೆಂಬ ಯುವಕ ಕಥೆಯಲ್ಲಿ ಅಹಂನ್ನು ಮೈಗೂಡಿಸಿಕೊಂಡ ಯುವಕ ರಾಜನಲ್ಲಿ ಕ್ಷಮೇ ಬೇಡುವ ಸನ್ನಿವೇಶ ಕಣ್ಣಿಗೆ ಕಟ್ಟುವಂತೆ ಮೂಡಿಬಂದಿದೆ, ಈ ಸಂಕಲನದಲ್ಲಿ ಕಥೆಗಳಿಗೆ ಕಿರೀಟದಂತಿರುವ ಘಾಟಿ ಮುದುಕಿ, ಸಿಂಹದ ನೀತಿ, ಹುಡುಗಿಯ ಪ್ರಾಮಾಣಿಕತೆ, ಕಥೆಯಲ್ಲಿ ಸೋಲು, ಗೆಲವುಗಳನ್ನು ಸಮನಾಗಿ ನೋಡುವಂತೆ ಎಲ್ಲರಿಗೂ ನೀತಿಬೋಧಿಸಿದ್ದಾರೆ ತಯಬಅಲಿ, ಹೊಂಬಳರವರು.
©2025 Book Brahma Private Limited.