ನಮ್ಮ ಹಳ್ಳಿ ನಮಗೆ ಚಂದ

Author : ಚಂದ್ರಕಾಂತ ಕರದಳ್ಳಿ

Pages 50

₹ 30.00




Year of Publication: 2010
Published by: ಕನ್ನಡನಾಡು ಲೇಖಕರ ಮತ್ತು ಓದುಗರ ಸಹಕಾರ ಸಂಘ
Address: ಜಿ-2, ಎ.ವಿ, ಹಾಸ್ಟೆಲ್ ಕಾಂಪ್ಲೆಕ್ಸ್, ಸೇಡಂ ರಸ್ತೆ, ಗುಲಬರ್ಗಾ - 585 105

Synopsys

ಮಕ್ಕಳ ಸಾಹಿತ್ಯವು ಬೌದ್ದಿಕತೆ ತುಸು ಹೆಚ್ಚಾದರೆ ಮಕ್ಕಳಿಂದ ದೂರವಾಗುವ ಮತ್ತು ಸರಳತೆ ಹೆಚ್ಚಾದರೆ ಸ್ವಾರಸ್ಯವು ಕಳೆದುಹೋಗುವ ಎರಡು ಅಪಾಯದ ತುದಿಗಳ ನಡುವೆ  ನಿಂತಿದೆ. ಇದನ್ನು ಸರಿತೂಗಿಸಿಕೊಂಡು ಬರಹದ ಚೆಲುವನ್ನು ಕಾಯ್ದುಕೊಳ್ಳುವುದು ಒಂದು ಸವಾಲಿನ ಕೆಲಸ, ’ನಮ್ಮ ಹಳ್ಳಿ ನಮಗೆ ಚೆಂದ’ ಸಂಕಲನದಲ್ಲಿಯ ಹಲವಾರು ಕತೆಗಳು ಸವಾಲನ್ನು ಸಮರ್ಥವಾಗಿ ಎದುರಿಸಿವೆ. 

About the Author

ಚಂದ್ರಕಾಂತ ಕರದಳ್ಳಿ
(25 August 1952)

ಮಕ್ಕಳ ಸಾಹಿತ್ಯದಲ್ಲಿ ಗಣನೀಯ ಸಾಧನೆ ಮಾಡಿರುವ ಚಂದ್ರಕಾಂತ ಕರದಳ್ಳಿಯವರು‌ ಯಾದಗಿರಿ ಜಿಲ್ಲೆಯ ಶಹಾಪುರದವರು.‌ 1952ರ ಆಗಸ್ಟ್ 25ರಂದು ಜನಿಸಿದರು. ತಂದೆ ರಾಚಯ್ಯಸ್ವಾಮಿ ಕರದಳ್ಳಿ. ತಾಯಿ ಮುರಿಗೆಮ್ಮ. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ (1985) ಪದವಿ‌ ಪಡೆದ ಅವರು ಮೈಸೂರು ವಿಶ್ವವಿದ್ಯಾನಿಲಯದಿಂದ ಬಿ.ಎಡ್. ಪದವಿ ಗಳಿಸಿದರು. ಪ್ರಾಥಮಿಕ ಶಾಲಾ ಶಿಕ್ಷಕರಾಗಿ ವೃತ್ತಿ ಜೀವನ ಆರಂಭಿಸಿದ ಅವರು ನಂತರ ಪ್ರೌಢಶಾಲಾ ಶಿಕ್ಷಕರಾದರು. 2012ರಲ್ಲಿ ನಿವೃತ್ತರಾದರು.  ಮಕ್ಕಳ ಕತೆ, ಕಾದಂಬರಿ, ಕಾವ್ಯ ರಚಿಸಿರುವ ಕರದಳ್ಳಿ ಅವರಿಗೆ ಕೇಂದ್ರ ಸರ್ಕಾರದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಸಂದಿದೆ. ಯಾದಗಿರಿ ಜಿಲ್ಲಾ ಸಾಹಿತ್ಯ ಸಮ್ಮೇಳನದ ...

READ MORE

Related Books