‘ಜರ್ನಿ ವಿದ್ ಗೌರಿ’ ಲೇಖಕ ಎಂ.ಜೆ. ರಾಜೀವ ಗೌಡ ಅವರ ಮಕ್ಕಳ ಸಾಹಿತ್ಯ ಕೃತಿಯಾಗಿದೆ. ಇಲ್ಲಿ ಮೋಹನ್ ಎಂ ಅವರ ಚಿತ್ರಗಳೊಂದಿಗೆ ಕತೆಯನ್ನು ಕಟ್ಟಿಕೊಡಲಾಗಿದೆ. ಗೌರಿ ಬಹಳ ಜಾಣೆ. ಖಗೋಳ ವಿಜ್ಞಾನ ಆಕೆಗೆ ತುಂಬ ಪ್ರಿಯವಾದ್ದು. ಭಾರೀ ಸಾಹಸಿ ಬೇರೆ! ಒಂದು ದಿನ ಏನಾಯಿತೆಂದರೆ- ಅನ್ಯಗ್ರಹ ಜೀವಿಗಳು ಇವರ ಹೊಲದಲ್ಲಿಳಿದರಂತೆ! ಈ ನೌಕೆ ಬಿಟ್ಟು ಬೇರೆ ನೌಕೆ ತರಿಸಿ, ಇದನ್ನು ಬಳಸುವುದು ಹೇಗೆಂದು ತಿಳಿಸಿ ವಾಪಾಸು ಹೋದರಂತೆ! ಗೌರಿ ಬಿಟ್ಟಾಳೆಯೇ- ತಾತನೊಂದಿಗೆ, ಸಹಪಾಠಿಗಳೊಂದಿಗೆ ನೌಕೆಯೇರುವ ಹಲವು ವಿಚಾರಗಳನ್ನು ಇಲ್ಲಿ ಕಾಣಬಹುದು. ಮಕ್ಕಳಿಗೆ ಇಷ್ಟವಾಗುವ ರೀತಿಯಲ್ಲಿ ಇಲ್ಲಿನ ಕಥಾನಕವನ್ನು ಕಟ್ಟಿಕೊಡಲಾಗಿದೆ. ಮಕ್ಕಳ ಲೋಕವನ್ನು ಅವರ ಆಸಕ್ತಿ ವಿಚಾರಗಳೊಂದಿಗೆ ಹೇಳುವ ಲೇಖಕ ಇಲ್ಲಿ ಪರಿಸರವನ್ನು ಕಥಾವಸ್ತುವನ್ನಾಗಿ ಹಿಡಿದಿಟ್ಟುಕೊಂಡಿದ್ದಾರೆ.
©2024 Book Brahma Private Limited.