`ಜಂಭದ ಹೇಸರಗತ್ತೆ' ಮಕ್ಕಳ ಕಥಾಪುಸ್ತಕವನ್ನು ಲೇಖಕಿ ಸಂಧ್ಯಾರಾಣಿ ಅವರು ರಚಿಸಿದ್ದಾರೆ. ಮುತ್ತಿನಸರ ಪುಸ್ತಕ ಸರಣಿಯ ಎರಡನೇ ಆವೃತ್ತಿಯಾಗಿ ಈ ಕಥಾಪುಸ್ತಕವು ಸ್ನೇಹ ಬುಕ್ ಹೌಸ್ ನ ಪ್ರಕಾಶನದೊಂದಿಗೆ ಹೊರಬಂದಿದೆ. ಪ್ರಾಣಿಗಳನ್ನೇ ಕೇಂದ್ರವಾಗಿರಿಸಿಕೊಂಡು ಮಕ್ಕಳಿಗೆ ಮನಮುಟ್ಟುವ ರೀತಿಯಲ್ಲಿ ಇಲ್ಲಿ ಲೇಖಕಿ ಕತೆ ರಚಿಸಿದ್ದಾರೆ. ಮುಖ್ಯವಾಗಿ ಚಿತ್ರಗಳನ್ನು ಒಲಗೊಂಡಿರುವ ಇಲ್ಲಿನ ಕತೆಗಳು ಮಕ್ಕಳ ಮನಸನ್ನು ಬೇಗನೇ ತಲುಪುತ್ತದೆ. ಸಂಧ್ಯಾಮಾಮಿ ಎಂದೇ ಚಿರಪರಿಚಿತರಾಗಿರುವ ಲೇಖಕಿ ಪುಸ್ತಕದ ಮುಖಪುಟದಲ್ಲಿ ಕೂಡ ಸಂಧ್ಯಾಮಾಮಿ ಹೇಳಿದ ಪುಟಾಣಿ ಕತೆಗಳು ಎಂದೇ ಬರೆದಿದ್ದಾರೆ.
ಮಣಿಪಾಲ್ ಮೀಡಿಯಾ ಎಂಟರ್‌ಟೈನ್‌ಮೆಂಟ್ ನೆಟ್‌ವರ್ಕ್ ವಿಭಾಗದ ಗೌರವ ನಿರ್ದೇಶಕಿಯಾಗಿರುವ ಸಂಧ್ಯಾ ಎಸ್. ಪೈ ಅವರು ಪತ್ರಿಕೋದ್ಯಮಿ, ಲೇಖಕಿ. ತರಂಗ ವಾರಪತ್ರಿಕೆ ಸೇರಿದಂತೆ ಮಣಿಪಾಲ್ ಮೀಡಿಯಾ ನೆಟ್‌ವರ್ಕ್‌ನ ನಾಲ್ಕು ಪತ್ರಿಕೆಗಳಿಗೆ ಸಂಪಾದಕಿ ಆಗಿದ್ದಾರೆ. ಸಂಧ್ಯಾ ಅವರು ಜನಿಸಿದ್ದು ಚಿಕ್ಕಮಗಳೂರಿನಲ್ಲಿ 1947ರ ಫೆಬ್ರುವರಿ 26ರಂದು. ತಂದೆ ಬಿ. ನಾರಾಯಣ ಬಾಳಿಗಾ ಹಾಗೂ ತಾಯಿ ಸುಮಿತ್ರಾದೇವಿ. ಇದು ಈಜಿಪ್ಟ್ ಇದು ಇಸ್ರೇಲ್ (ಪ್ರವಾಸ ಕಥನ), ಸಂಪಾದಕೀಯ ಅಂಕಣಗಳಾದ ’ಪ್ರಿಯ ಓದುಗರೇ’ ಬರಹಗಳ 10 ಸಂಪುಟಗಳು ಪ್ರಕಟವಾಗಿವೆ. ಕೊಂಕಣಿ ರಾಂದಪ (ಕನ್ನಡ, ಇಂಗ್ಲಿಷ್ ಆವೃತ್ತಿ). ಯಕ್ಷಪ್ರಶ್ನೆ, ಪರಂಪರೆಯ ಪುಟಗಳಿಂದ (ಭಾರತೀಯ ಧಾರ್ಮಿಕ-ಸಾಂಸ್ಕೃತಿಕ ಮೌಲ್ಯಗಳ ...
READ MORE