ಶ್ವೇತಾ ಜಿ ನಂಬಿಯಾರ್ ಅವರ ಚಿತ್ರ ಪುಸ್ತಕ ‘ಬೀಜ’. ಒಂದು ಬೀಜ ಬಿತ್ತುವುದು ಎಂದರೆ, ಪ್ರೀತಿ, ಕಾಳಜಿಯ ಸಂಕೇತ. ಹೊಸದರ ನಿರೀಕ್ಷೆ.ದಿನವೂ ಹೊಸ ಹೊಸ ಅಚ್ಚರಿ. ಅಸಂಖ್ಯಾತ ಸಾಧ್ಯತೆಗಳ ಮೆರವಣಿಗೆ. ಮಕ್ಕಳಿಗಾಗಿ ಬಿತ್ತಿರುವ ಚಿತ್ತಾರಗಳ ಬೀಜ ಈ ಪುಸ್ತಕದಲ್ಲಿದೆ.
ಶ್ವೇತಾ ನಿರಂತರವಾಗಿ ಕಲೆಯಲ್ಲಿ ತೊಡಗಲು, ಮಕ್ಕಳೊಂದಿಗೆ ಬೆರೆಯಲು ಇಚ್ಛಿಸುವವರು. ಅಜೀಂ ಪ್ರೇಮ್ ಜಿ ವಿಶ್ವ ವಿದ್ಯಾಲಯದಿಂದ "ಶಿಕ್ಷಣ" ಕುರಿತು ಸ್ನಾತಕೋತ್ತರ ಪದವಿಯನ್ನು ಪಡೆದು, ದೇಶದ ಪ್ರತಿಷ್ಠಿತ "ಏಕಲವ್ಯ ಪ್ರಕಾಶನ" ಮತ್ತು"ಏಕತಾರ ಪ್ರಕಾಶನ"ದೊಂದಿಗೆ ಕೆಲಸ ಮಾಡುತ್ತಾ, ಮಕ್ಕಳ ಪುಸ್ತಕ ಲೋಕಕ್ಕೆ ತೆರೆದುಕೊಂಡು, ತಾನೂ ಮಕ್ಕಳಿಗಾಗಿ ಚಿತ್ರ ಪುಸ್ತಕಗಳನ್ನು ರೂಪಿಸುವ ಉತ್ಸಾಹದಿಂದ, "ಎಲ್ಲರ ಪುಸ್ತಕ"ದ ಜೊತೆಯಾಗಿದ್ದಾರೆ. ...
READ MORE