ಲೇಖಕ ’ಸಂಪಟೂರು ವಿಶ್ವನಾಥ್’ ಅವರ ‘ಹುಲಿಯನ್ನು ತಿಂದ ಕಪ್ಪೆ' ಕೃತಿಯು ಮಕ್ಕಳ ಸಣ್ಣ ಕತೆಗಳ ಸಂಕಲನವಾಗಿದೆ. ಹುಲಿಯನ್ನು ತಿಂದ ಕಪ್ಪೆ ಮತ್ತು ಇಲ್ಲಿನ ಉಳಿದ 21 ಕಥೆಗಳು ಕನ್ನಡದ ದಿನಪತ್ರಿಕೆ ವಾರಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಈ ಎಲ್ಲ ಸಣ್ಣಕಥೆಗಳಲ್ಲಿ ಹಾಸ್ಯಲೇಪನವಿದ್ದರೂ ಇವುಗಳನ್ನು ಸ್ಕೂಲವಾಗಿ ಧಾರ್ಮಿಕ(ತಾತ್ವಿಕ), ವಿಚಾರ ಪ್ರಚೋದಕ, ಬುದ್ಧಿಯ ಬಲ ಮತ್ತು ಶುದ್ಧ ಹಾಸ್ಯದ, ನೆಲೆಗಟ್ಟಿನಲ್ಲಿ ರಚಿಸಲಾಗಿದೆ. ಮಕ್ಕಳಿಗೆ ತಿಳಿಸಿ ಹೇಳಬೇಕಾದ್ದನ್ನು ಗಂಭೀರಶೈಲಿಯಲ್ಲಿ, ಉದ್ದುದ್ದ ವಾಕ್ಯಗಳಲ್ಲಿ ಹೇಳುವುದಕ್ಕಿಂತ ಸರಳವಾದ ಭಾಷೆಯಲ್ಲಿ ದಿನನಿತ್ಯದ ಅನುಭವಗಳನ್ನು ಆಧರಿಸಿ ಹೇಳಿದರೆ ಮಕ್ಕಳಿಗೆ ಬೇಗ ಮನದಟ್ಟಾಗುತ್ತದೆ ಎನ್ನುತ್ತಾರೆ ಲೇಖಕರು.
ಲೇಖಕ ಸಂಪಟೂರು ವಿಶ್ವನಾಥ್ ಅವರು ಜನಿಸಿದ್ದು 1938 ಫೆಬ್ರುವರಿ 28ರಂದು. ತಾಯಿ ನಾಗಮ್ಮ, ತಂದೆ ಎಸ್. ಹನುಮಂತರಾವ್, ಮಲ್ಲೇಶ್ವರ ಸರ್ಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಣ ಪದವಿ ಪಡೆದ ಇವರು ಸರ್ಕಾರಿ ವಿಜ್ಞಾನ ಕಾಲೇಜಿನಿಂದ ಪದವಿ ಪಡೆದರು. ಅಧ್ಯಾಪಕರಾಗಿ ವೃತ್ತಿ ಆರಂಭಿಸಿದ ಇವರು ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿ ನಿವೃತ್ತರಾದರು. ವಿಜ್ಞಾನ, ಸಾಹಿತ್ಯ, ಸಂಗೀತ, ನೃತ್ಯ ಹೀಗೆ ಹಲವಾರು ಕ್ಷೇತ್ರಗಳಲ್ಲಿ ಪರಿಣಿತಿ ಹೊಂದಿದ್ದ ವಿಶ್ವನಾಥರು ಸುಮಾರು ಎರಡು ಸಾವಿರಕ್ಕೂ ಹೆಚ್ಚು ಲೇಖನಗಳನ್ನು ಬರೆದಿದ್ದಾರೆ. ಇವರಿಗೆ ಗೊರೂರು ಸಾಹಿತ್ಯ ಪ್ರಶಸ್ತಿ, ಎಂ.ಜಿ. ರಂಗನಾಥನ್ ಸ್ಮಾರಕ ಪ್ರಶಸ್ತಿ, ಸ್ನೇಹ – ಸೇತು ಬರಹಗಾರರ ಪ್ರಶಸ್ತಿ, ಕರ್ನಾಟಕ ...
READ MORE