‘ಮಕ್ಕಳ ಕಥಾ ಕುಸುಮಗಳು’ ವಿ.ಗಣೇಶ್ ಅವರ ಕಥಾಸಂಕಲನವಾಗಿದೆ. ಗಣೇಶ್ ಸ್ನೇಹಕ್ಕೆ ಮತ್ತೊಂದು ಹೆಸರು. ಒಮ್ಮೆ ಒಬ್ಬರ ಪರಿಚಯ ಆಯಿತು ಎಂದರೆ ಅವರ ಆಪ್ತವಲಯಕ್ಕೆ ಸೇರಿದಂತೆ, ಅವರ ನಿರಂತರ ಸಂಪರ್ಕ ಹಾಗೇ ಉಳಿಸಿಕೊಳ್ಳುವ ಸ್ನೇಹಪರತೆ ಅವರದು. ಇದಕ್ಕೆ ಕಾರಣ ಅವರು ಎಲ್ಲರಲ್ಲೂ ನೋಡಬಯಸುವ ಮತ್ತು ಹೇಳಬಯಸುವ ಒಳ್ಳೆಯ ಗುಣ ಹಾಗೂ ಅದನ್ನು ಮೆಟ್ಟಿ ಬಾಯ್ತುಂಬ ಉತ್ಸಾಹ, ಸಂತೋಷದಿಂದ ಮತ್ತೊಬ್ಬರಲ್ಲಿ ಹಂಚಿಕೊಳ್ಳುವ ಸದ್ದಾವ. ಹಿಂದೊಂದು- ಮುಂದೊಂದು ಎಂದೂ ಆಡದ ಗುಣ, ಗುಣಗ್ರಾಹಿ ಸ್ವಭಾವ, ತಾನು ಓದಿದ್ದನ್ನು ತಿಳಿದಿದ್ದನ್ನು ಮತ್ತೊಬ್ಬರಲ್ಲಿ ಹಂಚಿಕೊಂಡು ತನ್ನ ಮತ್ತು ಅವರ ಜ್ಞಾನವಿಕಾಸಕ್ಕೆ ಕಾರಣವಾಗುವ ಪ್ರಾಂಜಲ ಮನಸ್ಸು, ಗಣೇಶ್ ಇದ್ದಲ್ಲಿ ನಗುವಿರುತ್ತೆ. ವಿಚಾರವಿರುತ್ತೆ, ಬಂಧುತ್ವವಿರುತ್ತ, ಆತ್ಮೀಯತೆಯಿರುತ್ತದೆ. ಇವರಿಗೆ ಪಂಡಿತ ಪಾಮರರು, ವಿದ್ಯಾರ್ಥಿಗಳು ಸಹೋದ್ಯೋಗಿಗಳು, ಬಡವರುಬಲ್ಲಿದರು, ಕಿರಿಯರು ಹಿರಿಯರು, ನೌಕರರು ಅಧಿಕಾರಿಗಳು ಎಂಬ ಭೇದಭಾವವಿಲ್ಲ. ಎಲ್ಲರನ್ನೂ ಒಂದೇ ದೃಷ್ಟಿಯಿಂದ ನೋಡುವ, ಮಾತನಾಡಿಸುವ, ಉಪಚರಿಸುವ ಗುಣ. ಮಕ್ಕಳಿಗಾಗಿ ಬರೆದಿರುವ ಈ ಪ್ರಸಕ್ತ ಮಕ್ಕಳ ಕಥಾಸಂಕಲನದಲ್ಲಿ ಮಕ್ಕಳ ಮೇಲಿನ ಅವರ ಅಪಾರ ಪ್ರೀತಿ ಯನ್ನು ಎತ್ತಿ ತೋರಿಸುತ್ತದೆ.
ವಿ.ಗಣೇಶ ಅವರು ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದವರು. ಎಂ.ಎಸ್.ಸಿ, ಎಂ.ಎ., ಬಿ.ಎಡ್. ಪದವಿಯನ್ನು ಪೂರ್ಣಗೊಳಿಸಿದ್ದಾರೆ. ಪ್ರೌಢಶಾಲಾ ಅಧ್ಯಾಪಕರಾಗಿ, ಗಣಿತ ಉಪನ್ಯಾಸಕರಾಗಿ, ಇಂಗ್ಲೀಷ್ ಉಪನ್ಯಾಸಕರಾಗಿ, ಪ್ರಾಂಶುಪಾಲರಾಗಿ ಬಿ.ಎಡ್.ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸುಮಾರು 36 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. 75ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ...
READ MORE