ಕೆಂಪು ಪುಕ್ಕದ ಹುಂಜ ಮಕ್ಕಳ ಕಥಾ ಪುಸ್ತಕವನ್ನು ಲೇಖಕಿ ಸಂಧ್ಯಾ ಪೈ ಅವರು ರಚಿಸಿದ್ದಾರೆ. ಮುತ್ತಿನ ಸರ ಸರಣಿಯ 6ನೇ ಪುಸ್ತಕವಾಗಿ ಈ ಮಕ್ಕಳ ಸಾಹಿತ್ಯವು ಹೊರಬಂದಿದೆ. ಇಲ್ಲಿ ಪ್ರಾಣಿ ಮತ್ತು ಮನುಷ್ಯರನ್ನು ಕೇಂದ್ರವಾಗಿರಿಸಿಕೊಂಡು ಕಥೆ ಹೆಣೆಯಲಾಗಿದೆ. ಇಲ್ಲಿ ಹಲವಾರು ಚಿಕ್ಕ ನೀತಿಕಥೆಗಳನ್ನು ಲೇಖಕಿ ಚಿತ್ರಗಳೊಂದಿಗೆ ನೀಡಿದ್ದಾರೆ. ಚಿತ್ರಕತೆಗಳು ಮಕ್ಕಳ ಮನಸನ್ನು ಬೇಗನೇ ತಲುಪುತ್ತದೆ ಎಂದ ಉದ್ದೇಶದಿಂದ ಚಿತ್ರಗಳಿಗೆ ಹೆಚ್ಚು ಪ್ರಾಶಸ್ತ್ಯ ಈ ಪುಸ್ತಕದಲ್ಲಿ ನೀಡಲಾಗಿದೆ.ಅತ್ಯಂತ ಸರಳ ಭಾಷೆಯಲ್ಲಿ ರಚಿತವಾಗಿರುವ ಕತೆಗಳು ಮಕ್ಕಳಿಗೆ ಬಹುಬೇಗನೆ ಅರ್ಥವಾಗುತ್ತದೆ.
ಮಣಿಪಾಲ್ ಮೀಡಿಯಾ ಎಂಟರ್‌ಟೈನ್‌ಮೆಂಟ್ ನೆಟ್‌ವರ್ಕ್ ವಿಭಾಗದ ಗೌರವ ನಿರ್ದೇಶಕಿಯಾಗಿರುವ ಸಂಧ್ಯಾ ಎಸ್. ಪೈ ಅವರು ಪತ್ರಿಕೋದ್ಯಮಿ, ಲೇಖಕಿ. ತರಂಗ ವಾರಪತ್ರಿಕೆ ಸೇರಿದಂತೆ ಮಣಿಪಾಲ್ ಮೀಡಿಯಾ ನೆಟ್‌ವರ್ಕ್‌ನ ನಾಲ್ಕು ಪತ್ರಿಕೆಗಳಿಗೆ ಸಂಪಾದಕಿ ಆಗಿದ್ದಾರೆ. ಸಂಧ್ಯಾ ಅವರು ಜನಿಸಿದ್ದು ಚಿಕ್ಕಮಗಳೂರಿನಲ್ಲಿ 1947ರ ಫೆಬ್ರುವರಿ 26ರಂದು. ತಂದೆ ಬಿ. ನಾರಾಯಣ ಬಾಳಿಗಾ ಹಾಗೂ ತಾಯಿ ಸುಮಿತ್ರಾದೇವಿ. ಇದು ಈಜಿಪ್ಟ್ ಇದು ಇಸ್ರೇಲ್ (ಪ್ರವಾಸ ಕಥನ), ಸಂಪಾದಕೀಯ ಅಂಕಣಗಳಾದ ’ಪ್ರಿಯ ಓದುಗರೇ’ ಬರಹಗಳ 10 ಸಂಪುಟಗಳು ಪ್ರಕಟವಾಗಿವೆ. ಕೊಂಕಣಿ ರಾಂದಪ (ಕನ್ನಡ, ಇಂಗ್ಲಿಷ್ ಆವೃತ್ತಿ). ಯಕ್ಷಪ್ರಶ್ನೆ, ಪರಂಪರೆಯ ಪುಟಗಳಿಂದ (ಭಾರತೀಯ ಧಾರ್ಮಿಕ-ಸಾಂಸ್ಕೃತಿಕ ಮೌಲ್ಯಗಳ ...
READ MORE