ಲೇಖಕ ತಮ್ಮಣ್ಣ ಬೀಗಾರ ಅವರ ಹೊಸ ಕತಾ ಸಂಕಲನ ‘ನಕ್ಷತ್ರ ನೋಡುತ್ತ’ 17 ಕತೆಗಳನ್ನು ಒಳಗೊಂಡಿದೆ. ‘ಮಕ್ಕಳಿಗಾಗಿ ಬರೆಯಬೇಕು ಎನ್ನುವ ಹಂಬಲ ಕಾಡುವುದು, ಅದಕ್ಕಾಗಿ ಬಗೆಬಗೆಯಲ್ಲಿ ಬರಹವನ್ನು ಹರವಿಕೊಳ್ಳುವುದು ನಮ್ಮ ನಡುವಿನ ಕೆಲ ವಿಶಿಷ್ಟ, ಸಂವೇದನಾಶೀಲ ಮನಸ್ಸುಗಳಿಗೆ ಸಾಧ್ಯವಾಗುವಂಥದು. ತಮ್ಮಣ್ಣ ಬೀಗಾರ ಈ ಬಗೆಯ ಒಬ್ಬ ವಿಶೇಷದ ಬರಹಗಾರರು’ ಎಂದು ಸಾಹಿತಿ ಡಾ. ಆನಂದ ಪಾಟೀಲರು ಗುರುತಿಸಿದ್ದಾರೆ.
ಮಕ್ಕಳ ಲೋಕದ ವಿವಿಧ ಸಂಗತಿಗಳು ಕಥೆಗಳಾಗಿ ರೂಪುಗೊಂಡಿವೆ. ಪ್ರಾಣಿ ಪಕ್ಷಿಗಳ ಕಥೆಗಳೂ ಕೆಲವಿವೆ. ಅವನ್ನೂ ಬೀಗಾರರು ಹೊಸ ರೀತಿಯಲ್ಲಿ ಇಟ್ಟಿರುವ ಪರಿ ಮಕ್ಕಳಿಗೆ ಖುಷಿ ಕೊಡುವಂತಿದೆ. ಉಳಿದಂತೆ ಓದಿಗೆ ಹಂಬಲಿಸುವ ಮಕ್ಕಳು, ಶಾಲೆಯ ಸುತ್ತಲಿನ ಸಂಗತಿಗಳು, ಆಟ ನೋವುಗಳೆಲ್ಲ ಕಲಾತ್ಮಕ ಕಥೆಗಳಾಗಿ ಹರಡಿಕೊಂಡಿವೆ.
ಕತೆಗಾರ ತಮ್ಮಣ್ಣ ಬೀಗಾರ ಅವರು 1959 ನವೆಂಬರ 22 ರಂದು ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಬೀಗಾರ ಗ್ರಾಮದಲ್ಲಿ ಜನಿಸಿದರು. ಸ್ನಾತಕೋತ್ತರ ಪದವೀಧರರು. ವೃತ್ತಿಯಿಂದ ಶಿಕ್ಷಕರು. ಪ್ರಸ್ತುತ ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಸರಕಾರಿ ಹಿರಿಯ ಪ್ರಾಥಮಿಕ ಬಿದ್ರಕಾನ ಶಾಲೆಯಲ್ಲಿ ಮುಖ್ಯೋಪಾಧ್ಯಯರಾಗಿ ಪ್ರಸ್ತುತ ನಿವೃತ್ತಿ ಹೊಂದಿದ್ದಾರೆ. ಗುಬ್ಬಚ್ಚಿ ಗೂಡು, ಚಿಂವ್ ಚಿಂವ್, ಜೀಕ್ ಜೀಕ್, ಪುಟಾಣಿ ಪುಡಿಕೆ, ಸೊನ್ನೆ ರಾಶಿ ಸೊನ್ನೆ, ತೆರೆಯಿರಿ ಕಣ್ಣು ಖುಷಿಯ ಬೀಜ ಹಾಗೂ ಹಾಡಿನ ಹಕ್ಕಿ - ಮಕ್ಕಳ ಕವನ ಸಂಕಲನ. ಮಿಂಚಿನ ಮರಿ - ಶಿಶುಪ್ರಾಸ ಹೊತ್ತಿಗೆ ಕಪ್ಪೆಯ ಪಯಣ, ಜಿಂಕೆಮರಿ, ಹಸಿರೂರಿನ ಹುಡುಗ, ...
READ MORE