‘ಚಿಣ್ಣರ ಲೋಕದಲ್ಲಿ ಕಾರಂತರು’ ಭಾಗ-1 ಮಕ್ಕಳ ಕಲ್ಪನಾ ಶಕ್ತಿ ಹೆಚ್ಚಿಸುವಲ್ಲಿ ಕತೆಗಳ ಪಾತ್ರ ಮುಖ್ಯವಾದದ್ದು, ಆದರೇ ಅದೇ ಕತೆಗಳು ಮಕ್ಕಳ ಮನಸಿನಲ್ಲಿ ಮೌಡ್ಯವನ್ನು ತುಂಬಬಹುದು. ಜನಜೀವನದಲ್ಲಿ ಹಾಸುಹೊಕ್ಕಾಗಿರುವ ಅನೇಕ ಮೌಡ್ಯ, ನಂಬಿಕೆಗಳು ಮಕ್ಕಳ ಕುತೂಹಲಗಳನ್ನು ಹೆಚ್ಚಿಸುತ್ತವೆ. ಅದೇಕೆ ಹೀಗೆ, ಇದೇಕೆ ಹೀಗೆ ಎಂದು ಹಿರಿಯರಲ್ಲಿ ಕೇಳುತ್ತಾರೆ. ಆದರೆ ಅದಕ್ಕೆ ಸಿಗುವ ಉತ್ತರವೂ ಮೌಡ್ಯಗಳದ್ದೇ ಆಗಿದ್ದರೆ ಆ ಮಕ್ಕಳ ಮನಸ್ಸಿನಲ್ಲಿ ಅದೇ ಮೌಡ್ಯ ಬಿತ್ತಿದಂತಾಗುತ್ತದೆ. ಆದರೆ ಈ ಕೃತಿ ಮಕ್ಕಳ ಮನಸ್ಸಿನಲ್ಲಿ ಮೂಡುವ ಪ್ರಶ್ನೆಗಳಿಗೆ ಸ್ಪಷ್ಟವಾದ ಉತ್ತರಗಳನ್ನು ನೀಡುತ್ತದೆ. ಕಾರಂತರು ಮಕ್ಕಳ ಪ್ರಶ್ನೆಗಳಿಗೆ ಉತ್ತರಿಸುವಾಗ ಮಕ್ಕಳು ಅರ್ಥಮಾಡಿ ಕೊಳ್ಳಬಲ್ಲ ರೀತಿಯಲ್ಲಿಯೇ ಉತ್ತರಿಸಿ, ಅಂತಹ ನಂಬಿಕೆಗಳು ಅನುಸರಣೀಯವಲ್ಲ ಎಂಬ ಸೂಚನೆಯನ್ನು ಕೊಡುತ್ತಾರೆ. ಅಂತದ್ದೊಂದು ಸ್ಪಷ್ಟನೆ ಈ ಕೃತಿಯಲ್ಲಿ ಲಭಿಸುತ್ತದೆ. 1998ರಲ್ಲಿ ಪ್ರಥಮ ಮುದ್ರಣಕಂಡ ಈ ಕೃತಿ 2016ರಲ್ಲಿ ಐದನೇ ಮುದ್ರಣವನ್ನು ಕಂಡಿದೆ
©2025 Book Brahma Private Limited.