ಕಲಾತ್ಮಕವಾಗಿರುವ ಮಕ್ಕಳ ಕನಸುಗಳಿಗೆ ನೀರೆರೆದು ಪೋಷಿಸುವಂತಿರುವ ಕಥೆಗಳ ಸಂಕಲನ ಬಣ್ಣ. ಮಕ್ಕಳ ಪ್ರಪಂಚವೆಂದರೆ ಬಣ್ಣ ಬಣ್ಣದ ರಮ್ಯಲೋಕ. ಅವರಿಗೆ ಇರುವ ಸಣ್ಣ ಸಣ್ಣ ಆಸೆ ಆಕಾಂಕ್ಷೆಗಳು ದೊಡ್ಡವರ ದೃಷ್ಟಿಯಲ್ಲಿ ಕೆಲವೊಮ್ಮೆ ನಗಣ್ಯವೆನಿಸಿದರೂ ಮಕ್ಕಳಿಗೆ ಮಾತ್ರ ಅವು ಈಡೇರಿದಾಗ ಆಗುವ ಆನಂದ ಅಷ್ಟಿಷ್ಟಲ್ಲ. ಇಲ್ಲಿನ ಕಥೆಗಳೆಲ್ಲ ಮಕ್ಕಳು ಬಯಸಿದ್ದೆಲ್ಲ ಸುಲಭವಾಗಿ ಸಿಗದಿರುವ ಬಡ ಕುಟುಂಬಗಳ ಕಥೆಗಳೇ ಆಗಿದ್ದರೂ ಮಕ್ಕಳ ಜಾಣತನಕ್ಕೇನೂ ಬಡತನವಿದ್ದಂತಿಲ್ಲ. ಜಗಳ ಆಡದೆ ಸ್ನೇಹಿತರಂತಿದ್ದು ಹಂಚಿ ತಿನ್ನುವ ಸದ್ವರ್ತನೆಯನ್ನು ಕಲಿಸಬಲ್ಲ ತಾಯಿಯೊಬ್ಬಳು ``ಕಪ್ಪೆ ಮರಿಯ ಸ್ನೇಹ'' ಕಥೆಯಲ್ಲಿದ್ದಾಳೆ. ಮಕ್ಕಳಿಗೂ ಹಿರಿಯರಿಗೂ ಆದರ್ಶಗಳನ್ನು ಕಲಿಸಬಲ್ಲ ಕಥೆಗಳು ಈ ಕೃತಿಯಲ್ಲಿವೆ.
ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದವರು. ಹುಟ್ಟಿದ್ದು: 23 ಡಿಸೆಂಬರ್ 1969. ತಂದೆ ಆರ್. ಪಲವೇಸಮುತ್ತು ನಾಡಾರ್ ತಮಿಳುನಾಡಿನ ಚೆಟ್ಟಿಕುಳಂ ಮೂಲದವರು. ತಾಯಿ ಮಹಾದೇವಿ ಹರಿಕಂತ್ರ ನಾಡಾರ್ ಗೋಕರ್ಣ ಸಮೀಪದ ತೊರೆಗಜನಿಯವರು. ಇಲ್ಲಿಯವರೆಗೆ ಮಕ್ಕಳಿಗಾಗಿ 15 ಪುಸ್ತಕಗಳನ್ನು ಪ್ರಕಟಿಸಿದ್ದಾರೆ. 'ಬೆಳ್ಳಕ್ಕಿ ಮತ್ತು ಬುಲ್ ಬುಲ್', 'ನೆಗೆತ', 'ಕರಿಮುಖ' 'ಆಟ' ಪ್ರಮುಖ ಮಕ್ಕಳ ಸಾಹಿತ್ಯ ಕೃತಿಗಳು. ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿ, ಬಿಎಂಶ್ರೀ ಪ್ರತಿಷ್ಠಾನದ ಪ್ರಶಸ್ತಿ, ಸಂಧ್ಯಾ ಸಾಹಿತ್ಯ ವೇದಿಕೆಯ ಮೇವುಂಡಿ ಮಲ್ಲಾರಿ ವಿಶೇಷ ಪುರಸ್ಕಾರ, ಬಾಲವಿಕಾಸ ಅಕಾಡೆಮಿ ಪ್ರಶಸ್ತಿ ಸಂದಿವೆ. ಜೀವನೋಪಾಯ ಕ್ಕಾಗಿ ಹೈದರಾಬಾದಿನ ...
READ MORE