ತಾಮ್ರ ಕರ್ಣಿ ನಳಿನಿ ಕೆ.ಎಸ್ ಅವರ ಮಕ್ಕಳ ಕಥಾಸಂಕಲನವಾಗಿದೆ. ಈಗಿನ ಯಾಂತ್ರಿಕ ಯುಗದಲ್ಲಿ ಮಕ್ಕಳಿಗೆ ಕತೆ ಕೇಳಿ ಅವರ ಕುತೂಹಲಕ್ಕೆ ತಂಪೆರೆದು, ಆ ಸಣ್ಣ ಮಕ್ಕಳು, ಬೌದ್ಧಿಕವಾಗಿ ಹಾಗೂ ಮಕ್ಕಳ ಸರ್ವಾಂಗೀಣ ವಿಕಾಸಕ್ಕೆ ನಾಂದಿಯಾಗುವಂತೆ ಮಾಡುವ ಸಮಯ ಇಂದಿನ ತಂದೆ-ತಾಯಂದಿರಿಗೆ ಇಲ್ಲ. ಇದ್ದರೂ ಬೆರಳೆಣಿಕೆಯಷ್ಟು ಮಾತ್ರ ಯಾವುದೇ ಬಂಧು-ಬಳಗ, ಬಾಂಧವ್ಯಗಳೂ ಇಲ್ಲದಂತೆ ತಮ್ಮಲ್ಲಿರುವ ಯಂತ್ರಗಳೇ ತಮ್ಮ ಸಹಜೀವಿಗಳು ಎಂಬ ತೀರ್ಮಾನಕ್ಕೆ ಬಂದುಬಿಟ್ಟಿದ್ದಾರೆ. ಇಂತಹ ಸಂದರ್ಭದಲ್ಲಿ ನನಗೆ ಅನ್ನಿಸಿದ್ದು, ಮಕ್ಕಳಿಗಾಗಿ ಕೆಲವು ಕಥೆಗಳನ್ನು ಬರೆದರೆ ಅದನ್ನು ಮನೆಯ ಹಿರಿಯರು ಓದಿಯಾದರೂ ಮಕ್ಕಳಿಗೆ ಹೇಳುತ್ತಾರೆ. ಹಾಗಾಗಿ ಮಕ್ಕಳಿಗೆ ಇಷ್ಟವಾದ ಪ್ರಾಣಿ, ಪಕ್ಷಿಗಳು, ಗೊಂಬೆಗಳು ಇವುಗಳನ್ನೇ ಕಥಾವಸ್ತುಗಳನ್ನಾಗಿ ತೆಗೆದುಕೊಂಡು ಕಥೆ ಹೆಣೆಯಲಾಗಿದೆ. ಮಕ್ಕಳಿಗೆ ಈ ಕತೆಗಳಿಲದ ಸಂತೋಷವಾದರೆ ಲೇಖಕರ ಶ್ರಮ ಸಾರ್ಥಕ ಎಂದು ಸಾಹಿತ್ಯ ಸುಗ್ಗಿ ಪ್ರಕಾಶಕರು ಪುಸ್ತಕದ ಬೆನ್ನುಡಿಯಲ್ಲಿ ತಿಳಿಸಿದ್ದಾರೆ.
©2024 Book Brahma Private Limited.