ಲೇಖಕ ಭರತ ಬಿ. ರಾವ್ (ಭರತ ಭಾಸ್ಕರ ರಾವ್) ಅವರು ಮೂಲ ಸಂಸ್ಕೃತದಿಂದ ಕನ್ನಡಕ್ಕೆ ಪಂಚತಂತ್ರವನ್ನು ಅನುವಾದಿಸಿದ್ದ ಕೃತಿ ಇದು. ಪಂಡಿತ ವಿಷ್ಣು ಶರ್ಮ ವಿರಚಿತ ಈ ಕಥೆಗಳಲ್ಲಿ ಜೀವನ ದರ್ಶನವಿದೆ. ಮಿತ್ರಭೇದ ಮಿತ್ರಸಂಪ್ರಾಪ್ತಿ, ಕಾಕೋಲೂಕೀಯ, ಲಬ್ಧಪ್ರಣಾಶ ಹಾಗೂ ಅಪರೀಕ್ಷಿತಕಾರಕ ಎಂಬ ಪಂಚತಂತ್ರದ 5 ತಂತ್ರಗಳ 5 ಸೂತ್ರ ಕಥೆಗಳು ಹಾಗೂ ಅವುಗಳಲ್ಲಿ ಬರುವ 70 ಉಪಕಥೆಗಳನ್ನು ಒಳಗೊಂಡಿದೆ. ಮಕ್ಕಳಿಗಾಗಿ ಈ ಕಥೆಗಳು ಮನೋವಿಕಾಸದ ದೃಷ್ಟಿಯಿಂದ ಉಪಯುಕ್ತವಾಗಿವೆ.
ಭರತ ಬಿ. ರಾವ್ ಅವರು ಮೂಲತಃ ಬೆಂಗಳೂರು ನಿವಾಸಿ. ವೃತ್ತಿಯಿಂದ ಸಾಫ್ಟ್ ವೇರ್ ಎಂಜಿನಿಯರರು. ಹವ್ಯಾಸಿ ಬರಹಗಾರರು. ಚಾರಣ. ಪರ್ವತಾರೋಹಣ ಕುರಿತು ತಮ್ಮದೇ ಬ್ಲಾಗ್ ಗಳಲ್ಲಿ ಬರೆಯುವ ಮೂಲಕ ಬರಹ ಅಭಿಮಾನಿಗಳನ್ನು ಹೊಂದಿದ್ದು, ಪಶ್ಚಿಮ ಘಟ್ಟಗಳ ವಿವಿಧ ತಾಣಗಳನ್ನು ಪರಿಚಯಿಸಿದ್ದಾರೆ. ಸಂಸ್ಕೃತಾಭ್ಯಾಸಿಗಳು. ಪಂಚತಂತ್ರದ ಕಥೆಗಳನ್ನು ಮೂಲ ಸಂಸ್ಕೃತದಿಂದ ಕನ್ನಡಕ್ಕೆ ಅನುವಾದಿಸಿದ್ದಾರೆ. ...
READ MORE