ಡಾ. ಚಂದ್ರಶೇಖರ ಕಂಬಾರ ಅವರು ಮಕ್ಕಳಿಗಾಗಿ ಬರೆದ ಜಾನಪದ ಕಥೆಗಳ ಸಂಕಲನವಿದು. ಮಕ್ಕಳಿಗೆ ಕಥೆಗಳು ಹೇಳುವುದು, ಕೇಳುವುದು ಎರಡೂ ಅವರ ಮನೋವಿಕಾಸಕ್ಕೆ ಪೂರಕವಾದವುಗಳೇ. ಕಥೆಗಳಿಂದ ಅವರ ಕಲ್ಪನಾ ಶಕ್ತಿ ಹೆಚ್ಚುತ್ತದೆ. ವೈಚಾರಿಕ-ಭಾವನಾತ್ಮಕ ವಿಸ್ತಾರ ಹಾಗೂ ಆಳ ಪಡೆಯುತ್ತದೆ. ಅದಕ್ಕೆಂದೇ ನಮ್ಮ ಜಾನಪದರು ಮಕ್ಕಳಿಗಾಗಿ ಕಥೆಗಳುನ್ನು ರಚಿಸಿದ್ದಾರೆ. ಅವುಗಳು ಹೆಚ್ಚಾಗಿ ಅಜ್ಜಿ ಕಥೆಗಳು ಸೇರಿವೆ. ಇಂತಹ ಕಥೆಗಳನ್ನು ಆಯ್ದು ಸಂಗ್ರಹಿಸಿ ಸಂಪಾದಿಸಿದ ಕೃತಿ ಇದು. ಮಕ್ಕಳಿಗೆ ಇಂತಹ ಕಥೆಗಳು ಬದುಕಿನ ಸಕಾರಾತ್ಮಕ ಪ್ರೇರಣೆಗಳನ್ನು ನೀಡುತ್ತವೆ.
©2024 Book Brahma Private Limited.