ನಾಗವೇಣಿ ವೆಂ.ಹೆಗಡೆ, ಹೆಗ್ಗರ್ಸಿಮನೆ ಅವರು ಬರೆದ ಐದನೇ ಕೃತಿ ಈ 'ಕಥಾಸಾಗರಿ'. ಇದು ಚಿಣ್ಣರ ಐಸಿರಿ! . ಕನ್ನಡ ಸಾರಸ್ವತ ಲೋಕದಲ್ಲಿ ಪ್ರಸ್ತುತ ಮಕ್ಕಳ ಸಾಹಿತ್ಯವು ಅಬಾಲವೃದ್ಧರಿಗೆ ಅಗತ್ಯವಾಗಿ ಬೇಕಿದೆ. ನೈತಿಕ ಮೌಲ್ಯಗಳ ಅರಿವಿಗೆ ಮಕ್ಕಳಿಗೂ ಹಾಗೂ ಪಾಲಕರಿಗೂ ಮಕ್ಕಳ ಕಥೆ,ಕವನ,ಕಾದಂಬರಿ, ನಾಟಕ ಹೀಗೆ ಎಲ್ಲಾ ಪ್ರಕಾರದ ಶಿಶು ಸಾಹಿತ್ಯವು ಸನ್ಮಾರ್ಗದಲ್ಲಿ ನಡೆಯಲು ಕಲಿಸುತ್ತದೆ. ನಾವು ಪ್ರಾಥಮಿಕ ಶಿಕ್ಷಣದ ಹಂತದಲ್ಲಿ ಈ ಮಕ್ಕಳ ಕಥೆಗಳನ್ನು ಓದುತ್ತ ಬೆಳೆದಿದ್ದೇವೆ. ಚಂದಮಾಮ, ಬಾಲಮಂಗಳ, ತುಂತುರುಗಳಂತಹ ಮಕ್ಕಳ ಪತ್ರಿಕೆಗಳ ಕಥೆಗಳಿಂದ ಸಾಕಷ್ಟು ಪ್ರಭಾವಿತರಾಗಿದ್ದೇವೆ. "ಈಗ ಆಧುನಿಕ ಯುಗದ ಮಕ್ಕಳಿಗೆ ಉತ್ತಮ ಕಥಾ ಪುಸ್ತಕಗಳು ಸಿಗುತ್ತಿಲ್ಲ, ಮಕ್ಕಳ ಸಾಹಿತಿಗಳ ಸಂಖ್ಯೆ ತಗ್ಗಿದೆ. ಮಕ್ಕಳ ಮನಸ್ಥಿತಿ ಅರಿತು ಅವರನ್ನು ತಿದ್ದುವ ಹಾಗೂ ಮುನ್ನಡೆಸಬಹುದಾದ ಕಥೆ ಹೆಣೆಯುವ ಕೆಲಸ ಹೆಚ್ಚಾಗುತ್ತಿಲ್ಲ..." ಎಂದು ದೂಷಿಸುವವರ ಕೊರಗು ನಿವಾರಿಸಲೆಂದೇ ಶ್ರೀಮತಿ ನಾಗವೇಣಿ ಹೆಗಡೆಯವರು 'ಕಥಾ ಸಾಗರಿ' ಕೃತಿಯ ಮೂಲಕ ಉತ್ತಮ ಕಥೆಗಳನ್ನು ಮಕ್ಕಳ ಲೋಕಕ್ಕೆ ಅರ್ಪಿಸಿದ್ದಾರೆ.
©2024 Book Brahma Private Limited.