ಹಿಡಿಂಬನ ತೋಟ

Author : ಎನ್‌. ಶ್ರೀನಿವಾಸ ಉಡುಪ

Pages 48

₹ 30.00




Year of Publication: 2013
Published by: ನವಕರ್ನಾಟಕ ಪಬ್ಲಿಕೇಷನ್ಸ್‌
Address: ಎಂಬೆಸಿ ಸೆಂಟರ್, ನಂ.11, ಕ್ರೆಸೆಂಟ್ ರಸ್ತೆ, ಬೆಂಗಳೂರು-560 001
Phone: 0802220358001

Synopsys

‘ಹಿಡಿಂಬನ ತೋಟ’ ಲೇಖಕ ಎನ್. ಶ್ರೀನಿವಾಸ ಉಡುಪ ಅವರು ರಚಿಸಿರುವ ಮಕ್ಕಳ ನಾಟಕವಿದು. ರಾಕ್ಷಸ ಹಿಡಿಂಬ ಮತ್ತು ಆತನ ತೋಟದ ಬಗ್ಗೆ ಕತೆ ಹೊಸೆಯಲಾಗಿದೆ. ಮಕ್ಕಳಿಂದ ತುಂಬಿದ್ದ ಸುಂದರ ತೋಟಕ್ಕೆ ಮಕ್ಕಳನ್ನು ಬರದಂತೆ ಮಾಡುತ್ತಾನೆ ಹಿಡಿಂಬ, ಆತನ ಕ್ರೌರ್ಯಕ್ಕೆ ಅಂಜಿ ವಸಂತ ಋತುವೂ ಆತನ ತೋಟಕ್ಕೆ ಬರದಂತಾಗುತ್ತದೆ, ಆದ್ದರಿಂದ ಇಡೀ ತೋಟ ಬರಡಾಗುತ್ತದೆ ಇದರಿಂದ ಅರಿವು ಪಡೆದ ಹಿಡಿಂಬ ಮಕ್ಕಳನ್ನು ತೋಟಕ್ಕೆ ಆಹ್ವಾನಿಸುತ್ತಾನೆ. ಆಗ ಮತ್ತೆ ವಸಂತವೂ ಬಂದು ತೋಟ ನಳನಳಿಸುತ್ತದೆ. ಇಂಥಾದ್ದೊಂದು ಕತೆಯ ಜೊತೆಗೆ ಮಕ್ಕಳಲ್ಲಿ ಪರಿಸರದ ಬಗ್ಗೆ ಕಾಳಜಿ ಮೂಡುವಂತೆ ಕತೆ ಹೆಣೆದಿದ್ದಾರೆ ಲೇಖಕರು.

About the Author

ಎನ್‌. ಶ್ರೀನಿವಾಸ ಉಡುಪ

ತಮ್ಮ ಅನನ್ಯ ಮಕ್ಕಳ ಸಾಹಿತ್ಯ ರಚನೆಯ ಮೂಲಕ ಮಕ್ಕಳ ಮನಸ್ಸನ್ನು ಗೆದ್ದವರು ಎನ್‌. ಶ್ರೀನಿವಾಸ ಉಡುಪ. ಅವರು 1935 ಆಗಸ್ಟ್‌ 15ರಂದು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ ಜನಿಸಿದರು. ತಂದೆ ಎನ್‌. ವೆಂಕಟೇಶ ಉಡುಪ, ತಾಯಿ ಮಹಾಲಕ್ಷ್ಮಿ. ತಮ್ಮ ವಿದ್ಯಾಭ್ಯಾಸದ ನಂತರ ತುಂಗಾ ಕಾಲೇಜಿನಲ್ಲಿ ದೀರ್ಘ ಕಾಲ ಇಂಗ್ಲೀಷ್ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದಾರೆ. ತೀರ್ಥಹಳ್ಳಿಯ ಪ್ರಥಮ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ಅಲಂಕರಿಸಿದ್ದರು. ‘ಪಾಪು ಪದ್ಯಗಳು, ಕನ್ನಡ ನಾಡಿನ ಕೂಸುಮರಿ, ಕುಂಭಕರ್ಣನ ನಿದ್ದೆ’ ಅವರ ಮಕ್ಕಳ ಕವನ ಸಂಕಲನಗಳಾಗಿದ್ದು ‘ಹಿಡಿಂಬನ ತೋಟ, ಬೆರಳುಗಳು’ ಹೀಗೆ ಮಕ್ಕಳ ನಾಟಕಗಳನ್ನು ರಚಿಸಿದ್ದಾರೆ. ‘ಗೂಬಜ್ಜಿಯ ...

READ MORE

Related Books