ಕೈಲಾಶ್ ತಿಪಟೂರು ಅವರ ಚಿತ್ರ ಪುಸ್ತಕ ‘ಏಕೆ ಬೇಕು ಕನ್ನಡ’. ಸುಮಾರು ಇಪ್ಪತ್ತು, ಮೂವತ್ತು ವರ್ಷಗಳ ಹಿಂದೆ ನಮ್ಮ ಕಣ್ಣಿಗೆ-ಕಿವಿಗೆ ಬೀಳುತ್ತಿದ್ದ ಕನ್ನಡ ಇವತ್ತಿಗೆ ಕಡಿಮೆಯಾಗಿದೆ. ಈ ಪುಸ್ತಕವನ್ನು ಮಕ್ಕಳು, ಮಕ್ಕಳಿಗಾಗಿ ದೂಡ್ಡವರು ಗಟ್ಟಿಯಾಗಿ ಓದಬೇಕು ಮತ್ತು ಹಾಡಬೇಕು. ಕನ್ನಡದ ಪದಗಳು, ವಾಕ್ಯಗಳು, ಪ್ರಾಸಗಳು ಮಕ್ಕಳ ಕಿವಿಗೆ ಬೀಳಬೇಕು. ಚಿತ್ರಗಳನ್ನು ನೋಡಿ ಸುತ್ತಲಿನ ವಸ್ತುಗಳನ್ನು, ಪದಾರ್ಥಗಳನ್ನು ಕನ್ನಡದಲ್ಲಿ ಗುರುತಿಸಿ, ನಿತ್ಯಜೀವನದಲ್ಲಿ ಕನ್ನಡ ಬಳಕೆಯನ್ನು ಉತ್ತೇಜಿಸುವ ಆಸೆಯಿಂದ "ಎಲ್ಲರ ಪುಸ್ತಕ" ಈ ಪುಸ್ತಕವನ್ನು ಪ್ರಕಟಿಸಿದೆ. ವನಿತಾ ಅಣ್ಣಯ್ಯ ಯಾಜಿ ಅವರು ರಚಿಸಿದ ಚಿತ್ರಗಳು ಈ ಪುಸ್ತಕದಲ್ಲಿವೆ.
ಕೈಲಾಶ್ ತಿಪಟೂರು ಅವರು ನೀನಾಸಂ ಪದವೀಧರರು. ಸದ್ಯ ಸಿನಿಮಾ, ಕಿರುತೆರೆಯಲ್ಲಿ ನಟನೆ ಮಾಡುತ್ತಿದ್ದಾರೆ. ಎಲ್ಲರ ಪುಸ್ತಕದ ಸಹ ಸಂಸ್ಥಾಪಕರಾದ ಇವರು ಕನ್ನಡದ ಮಕ್ಕಳಿಗೆ ತಾಯ್ನುಡಿಯಲ್ಲಿ ಪುಸ್ತಕವನ್ನು ಹೆಚ್ಚೆಚ್ಚು ಹೊರತರುವ ಪ್ರಯತ್ನದಲ್ಲಿ ಇದ್ದಾರೆ. ...
READ MORE