'ಕೆಂಪು ಸ್ವೆಟರ್' ಸೋಮಲಿಂಗ ಬೇಡರ ಅವರ ಮಕ್ಕಳ ಕಥಾ ಸಂಕಲನವಾಗಿದ್ದು ಇದರಲ್ಲಿ ಒಟ್ಟು 12 ಕಥೆಗಳಿವೆ. ಪೌರಾಣಿಕ, ಸಾಮಾಜಿಕ, ರಮ್ಯತೆಯ ವಿಷಯ ವಸ್ತುಗಳನ್ನು ಒಳಗೊಂಡ ಕಥೆಗಳು ಮಕ್ಕಳ ಮನಸ್ಸನ್ನು ಸೂಜಿಗಲ್ಲಿನಂತೆ ಸೆಳೆಯುತ್ತವೆ. ಮಕ್ಕಳಲ್ಲಿ ಉತ್ತಮ ಮೌಲ್ಯಗಳನ್ನು ಬಿತ್ತುವಲ್ಲಿ ಪ್ರತಿಯೊಂದು ಕಥೆಗಳು ಯಶಸ್ವಿಯಾಗುತ್ತವೆ. ಇದು ಸೋಮಲಿಂಗ ಅವರ ಮೊದಲ ಮಕ್ಕಳ ಕಥಾ ಸಂಕಲನವಾಗಿದ್ದರೂ ಮೊದಲ ಪ್ರಯತ್ನದಲ್ಲಿಯೇ ಯಶಸ್ಸು ಪಡೆದಿದ್ದಾರೆ. ವಾಸ್ತವ ಸಂಗತಿಗಳನ್ನು ಕಥನವಾಗಿಸುವ ಕಲೆ ಅದ್ಭುತವಾಗಿದೆ. ಕೆಂಪು ಸ್ವೆಟರ್ ಕಥೆಯಂತೂ ಎಂಥವರ ಹೃದಯವನ್ನು ತಟ್ಟಿ ಕಣ್ಣಂಚಿನಲ್ಲಿ ನೀರು ಜಿನುಗುವಂತೆ ಮಾಡದಿದರದು. ಉಳಿದಂತೆ ಎಲ್ಲಾ ಕಥೆಗಳು ಓದದೆ ಕೃತಿ ಹಾಗೇ ಎತ್ತಿಡಲು ಆಗದು. ಇಂಥ ಹೊಸ ಪ್ರಯತ್ನಗಳು ಮಕ್ಕಳ ಕಥಾ ಲೋಕದಲ್ಲಿ ನಡೆಬೇಕಾದ ತುರ್ತು ಈಗಿನದು.
©2025 Book Brahma Private Limited.