ಪಿ. ವೆಂಕಟಕೃಷ್ಣನ್ ಹಾಗೂ ಬಿ.ಎಸ್. ಶೈಲಜಾ ಅವರು ಸಂಪಾದಿಸಿದ ಮಕ್ಕಳ ಕಥೆಗಳ ಸಂಗ್ರಹ-ಪುಟ್ಟ ಪುಟಾಣಿಯ ದೊಡ್ಡ ಕತೆಗಳು. ಕತೆಗಳು ಚಿಕ್ಕದಾಗಿದ್ದರೂ ಅಲ್ಲಿಯ ಸಂದೇಶ ದೊಡ್ಡವರಿಗೂ ಅನ್ವಯಿಸುತ್ತವೆ ಎಂಬ ಅರ್ಥದಲ್ಲಿ ಕೃತಿಯ ಶೀರ್ಷಿಕೆಯ ಇದೆ. ಮಕ್ಕಳ ವೈಜ್ಞಾನಿಕ, ತಾರ್ಕಿಕ ಸಾಮರ್ಥ್ಯ ಹೆಚ್ಚಿಸುವಲ್ಲಿ ಇಲ್ಲಿಯ ಕಥೆಗಳು ವಿಷಯ ವಸ್ತುವಿನ ಹಂದರ ಹೊಂದಿವೆ.
ಶೈಲಜಾ ಬಿ.ಎಸ್. ಜವಹರಲಾಲ್ ನೆಹರೂ ತಾರಾಲಯದ ಶೈಕ್ಷಣಿಕ ಕಾರ್ಯಕ್ರಮಗಳ ನಿರ್ವಾಹಕರು. ತಂದೆ : ಬ.ನ. ಸುಂದರರಾವ್, ತಾಯಿ- ರತ್ತಮ ಸುಂದರರಾವ್. ಶುಕ್ರಗ್ರಹದ ಸಂಕ್ರಮಣ, ನನ್ನ ಮಿತ್ರ ಸೋರಣ್ಣ (ಜೆ.ಬಿ.ಎಸ್. ಹಾಲ್ಲೆನರ ಮಿ. ಲೀಕಿಯ ಅನುವಾದ), ಬಾನಿಗೊಂದು ಕೈಪಿಡಿ ಕೃತಿಯ ಸಂಪಾದನೆ ನವಕರ್ನಾಟಕ ಜ್ಞಾನವಿಜ್ಞಾನ ಕೋಶದಲ್ಲಿ ಖಗೋಳ ವಿಜ್ಞಾನ ಭಾಗದ ರಚನೆ, ಸಫಾರಿ ಎಂಬ ಲಕ್ಷುರಿ (ಪ್ರವಾಸ ಕಥನ) (2007), ದೂರದರ್ಶಕ, ಗ್ರಹಣ, ಸೂರ್ಯ, ಸೌರವ್ಯೂಹ, ಅಗಸದ ಅಲೆಮಾರಿಗಳು (ವಿಜ್ಞಾನ ಸಾಹಿತ್ಯ) ಮುಂತಾದ ಕೃತಿಗಳನ್ನು ರಚಿಸಿದ್ದಾರೆ. ಶುಕ್ರಗ್ರಹದ ಸಂಕ್ರಮಣಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ, ಎಚ್.ಎನ್. ದತ್ತಿನಿಧಿ ಬಹುಮಾನ, ...
READ MORE