‘ಮಣ್ಣಿಗೆ ಮಣ್ಣು’ ಲೇಖಕ ಪ. ರಾಮಕೃಷ್ಣ ಶಾಸ್ತ್ರಿ ಅವರ ಕೃತಿ. ಇದೊಂದು ಮಕ್ಕಳ ಕಥೆಗಳ ಸಂಕಲನವಾಗಿದೆ. ಈ ಕೃತಿಯ ಬಗ್ಗೆ ಬರೆಯುತ್ತಾ ‘ನಲವತ್ತೆಂಟು ವರ್ಷಗಳ ಸುದೀರ್ಘ ಬರವಣಿಗೆಯಲ್ಲಿ ಬರೆದದ್ದು ಬಹುಪಾಲು ಮಕ್ಕಳಿಗೆ. ಒಂದಿಷ್ಟು ಹಿರಿಯರಿಗೆ, ಈ ಬರಹಗಳಿಗೆ ಅವಕಾಶ ನೀಡಿ ಬೆಳೆಸಿದ್ದು ಕನ್ನಡದ ಎಲ್ಲ ಪತ್ರಿಕೆಗಳು ಎನ್ನುತ್ತಾರೆ ಲೇಖಕ ಪ. ರಾಮಕೃಷ್ಣ. ಈ ಕೃತಿಯಲ್ಲಿ ಮಕ್ಕಳಿಗೆ ಬದುಕಿನ ಆದರ್ಶಗಳನ್ನು ಹೇಳುವಂತಹ ಹಲವಾರು ಕಥೆಗಳಿವೆ.
ಮಕ್ಕಳ ಸಾಹಿತಿ ಎಂದೇ ಪ್ರಸಿದ್ಧರಾಗಿರುವ ಪ. ರಾಮಕೃಷ್ಣ ಶಾಸ್ತ್ರಿಯವರು ಹುಟ್ಟಿದ್ದು1953ರ ಜುಲೈ 7ರಂದು. ಊರು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು. ತಂದೆ ವೆಂಕಟರಮಣ ಶಾಸ್ತ್ರಿ, ತಾಯಿ ಗುಣವತಿ. ಪ್ರಾರಂಭಿಕ ಶಿಕ್ಷಣ ಮನೆಯಲ್ಲಿಯೇ ಕಲಿತ ಅವರು ನೇರವಾಗಿ ನಾಲ್ಕನೆ ತರಗತಿಗೆ ಸೇರ್ಪಡೆಯಾದರು ಓದಿದ್ದು ಏಳನೆಯ ತರಗತಿಯವರೆಗೆ ಮಾತ್ರ. ಪುತ್ತೂರಿನ ಬಳಿ ಕಬಕ ಮಾಧ್ಯಮಿಕ ಶಾಲೆಯಲ್ಲಿ ಓದುತ್ತಿದ್ದ ಅವರ ಕುಟುಂಬ ಸಾಂಸಾರಿಕ ತೊಂದರೆಯಿಂದ ಮಚ್ಚಿನ ಗ್ರಾಮಕ್ಕೆ ವಲಸೆ ಹೋಗಬೇಕಾಯಿತು. ಇದರಿಂದಾಗಿ ಓದಿಗೆ ತಡೆಯುಂಟಾಗಿ ಶಾಲೆ ತೊರೆದರು. ಆನಂತರ ಅವಲಂಭಿಸಿದ್ದು ಕೃಷಿ. ‘ಹಿಮದ ಹುಡುಗಿ’, ‘ಆನೆ ಮತ್ತು ಇರುವೆ’, ‘ಚಿನ್ನದ ಸೇಬು’, ‘ಚಿನ್ನದ ಗರಿ’, ...
READ MORE