ಲೇಖಕ ಸು. ರುದ್ರಮೂರ್ತಿ ಅವರ ಕೃತಿ ಬೀರಬಲ್ಲನ ಕಥೆಗಳು. ಮೊಗಲ್ ಸಾಮ್ರಾಜ್ಯದ ಅಕ್ಬರನ ಆಸ್ಥಾನದಲ್ಲಿ ಬೀರಬಲ್ಲನು ಮಂತ್ರಿಯಾಗಿದ್ದು, ಅವನು ವಿದೂಷಕನೂ ಆಗಿದ್ದ. ಕಥೆಗಳ ಮೂಲಕ, ಬುದ್ಧಿಶಕ್ತಿ-ಸಾಮರ್ಥ್ಯದ ಮೂಲಕ ಅರಸೊತ್ತಿಗೆ ಮುಂದೆ ಬರುವ ಸಮಸ್ಯೆಗಳಿಗೆ ಪರಿಹಾರ ನೀಡುತ್ತಿದ್ದ. ಈತನ ಕಥೆಗಳು ಬುದ್ಧಿವಂತಿಕೆಗೆ, ಜಾಣ್ಮೆಗೆ, ವಿವಾದಗಳ ಪರಿಹಾರಕ್ಕೆ ವಿವೇಕಯುತವಾದ ಸಕಾಲಿಕ ಉತ್ತರಗಳಾಗಿವೆ. ತರ್ಕಶಕ್ತಿಯನ್ನು ಹೆಚ್ಚಿಸುತ್ತವೆ. ಬೀರಬಲ್ಲನ ಕಥೆಗಳೆಂದೇ ಖ್ಯಾತಿ ಪಡೆದ ಈ ಕಥೆಗಳನ್ನು ಲೇಖಕರು ಸರಳ ಕನ್ನಡದಲ್ಲಿ ಮಕ್ಕಳಿಗಾಗಿ ಸಂಪಾದಿಸಿ ಕೊಟ್ಟಿರುವುದು ಈ ಕೃತಿಯ ವೈಶಿಷ್ಟ್ಯ.
©2024 Book Brahma Private Limited.