ತಯಬ್ ಅಲಿ ಹೊಂಬಳ ಅವರು ಮಕ್ಕಳಿಗಾಗಿ ರಚಿಸಿದ ಕಥೆಗಳ ಸಂಕಲನ ’ಸ್ನೇಹಗೂಡಿನ ಚಿಲಿಪಿಲಿ’. ಈ ನೀತಿಕಥೆಗಳ ಸಂಕಲನದಲ್ಲಿ ಬೇರೆ ಬೇರೆಯವರು ರಚಿಸಿದ 25 ಕಥೆಗಳಿವೆ. ಮಕ್ಕಳಿಗಾಗಿ ಅರ್ಥಪೂರ್ಣ ನೀತಿಬೋಧೆ, ಶಿಕ್ಷಣ ಮಮಕಾರ, ಪ್ರೀತಿ, ವಿಶ್ವಾಸ, ಸುಳ್ಳು, ಕಪಟ, ಮೋಸಗಳ ಪ್ರಾಬಲ್ಯ ಕುಗ್ಗಿಸುವ ಸತ್ಯವಂತಿಕೆಗಳು ಕಥೆಗಳಲ್ಲಿ ನಿರೂಪಿತವಾಗಿವೆ. ಮೌಲ್ಯ ಹಾಗೂ ಪ್ರೀತಿಯನ್ನು ಪ್ರತಿಪಾದಿಸುವ ಕಥೆಗಳಿವು.
ತಯಬಅಲಿ ಅ.ಹೊಂಬಳ ಅವರು ಮಕ್ಕಳ ಸಾಹಿತಿ. ಅಪರೂಪದ ವ್ಯಕ್ತಿತ್ವ ಹೊಂದಿರುವ ಅವರು ಕವಿ, ಕಥೆಗಾರ, ಆದರ್ಶವಾದಿಯಾಗಿಯೂ ಪರಿಚಿತರು. ಸರಳ ಸಜ್ಜನಿಕೆ, ವಿನೀತಾಭಾವದ ಇವರು ಕಳೆದ ಎರಡು ದಶಕಗಳಿಂದಲೂ ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಬೆರಳಚ್ಚು, ಗಣಕ ಶಿಕ್ಷಕರು. ಕ್ರಿಯಾಶೀಲ ಮನೋಭಾವದ ತಯಬಅಲಿ ಹಲವಾರು ಕಷ್ಟ ಕಾರ್ಪಣ್ಯಗಳ ಮಧ್ಯೆಯೇ ವಿಶಿಷ್ಟ ವ್ಯಕ್ತಿತ್ವ ರೂಪಿಸಿಕೊಂಡವರು. ಮುಂಡರಗಿ ತಾಲೂಕಿನ ಡಂಬಳ ಗ್ರಾಮದಲ್ಲಿ ಜನಿಸಿದ ತಯಬಅಲಿ ಓದುವ ಉತ್ಕಟ ಉದ್ದೇಶದದಿಂದ ಗದುಗಿಗೆ ಬಂದು ನೆಲೆಸಿದರು. ಶಿಕ್ಷಕ ತರಬೇತಿ ಪೂರೈಸಿ ಚಿತ್ರಕಲೆಯಲ್ಲಿ ಆಸಕ್ತಿ ಇದ್ದ ಕಾರಣ ಎ.ಎಂ.ಜೆ.ಡಿ ಪದವಿಯನ್ನು ಪಡೆದು ನಂತರ ತಮನೆ ಪ್ರಿಯವಾದ ಬೆರಳಚ್ಚು ಶಿಕ್ಷಕರಾಗಿ ಕಾರ್ಯ ...
READ MORE