ಲೇಖಕ ಸಂಪಟೂರು ವಿಶ್ವನಾಥ್ ಅವರು ಬರೆದ ಮಕ್ಕಳ ಸಾಹಿತ್ಯ ಕೃತಿ 'ಕ್ಷಣಕ್ಕೊಂದು ಕಥೆ'. ಪುಸ್ತಕವು ಮಕ್ಕಳಿಗಾಗಿಯೇ ಬರೆದ 120 ಸಣ್ಣ ಕಥೆಗಳ ಸಂಕಲನವಾಗಿದೆ. ಮಕ್ಕಳ ಚಂಚಲ ಬುದ್ಧಿಯನ್ನು ಹಿಡಿದಿಡಲು ಸಣ್ಣ ಕಥೆಗಿಂತ ಉತ್ತಮ ಮಾರ್ಗವಿಲ್ಲ ಎಂಬಂತೆ ಮಕ್ಕಳು ಸೃಜನಶೀಲರಾಗಿ, ಸೂಕ್ಷ್ಮಬುದ್ದಿ, ವಿವೇಕ ಹಾಗೂ ಶ್ರದ್ದೆಯಿಂದ ಬೆಳೆಯಲು ಇಲ್ಲಿರುವ ಕತೆಗಳು ಸಹಾಯ ಮಾಡಬಲ್ಲವುಗಳಾಗಿವೆ.
ಲೇಖಕ ಸಂಪಟೂರು ವಿಶ್ವನಾಥ್ ಅವರು ಜನಿಸಿದ್ದು 1938 ಫೆಬ್ರುವರಿ 28ರಂದು. ತಾಯಿ ನಾಗಮ್ಮ, ತಂದೆ ಎಸ್. ಹನುಮಂತರಾವ್, ಮಲ್ಲೇಶ್ವರ ಸರ್ಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಣ ಪದವಿ ಪಡೆದ ಇವರು ಸರ್ಕಾರಿ ವಿಜ್ಞಾನ ಕಾಲೇಜಿನಿಂದ ಪದವಿ ಪಡೆದರು. ಅಧ್ಯಾಪಕರಾಗಿ ವೃತ್ತಿ ಆರಂಭಿಸಿದ ಇವರು ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿ ನಿವೃತ್ತರಾದರು. ವಿಜ್ಞಾನ, ಸಾಹಿತ್ಯ, ಸಂಗೀತ, ನೃತ್ಯ ಹೀಗೆ ಹಲವಾರು ಕ್ಷೇತ್ರಗಳಲ್ಲಿ ಪರಿಣಿತಿ ಹೊಂದಿದ್ದ ವಿಶ್ವನಾಥರು ಸುಮಾರು ಎರಡು ಸಾವಿರಕ್ಕೂ ಹೆಚ್ಚು ಲೇಖನಗಳನ್ನು ಬರೆದಿದ್ದಾರೆ. ಇವರಿಗೆ ಗೊರೂರು ಸಾಹಿತ್ಯ ಪ್ರಶಸ್ತಿ, ಎಂ.ಜಿ. ರಂಗನಾಥನ್ ಸ್ಮಾರಕ ಪ್ರಶಸ್ತಿ, ಸ್ನೇಹ – ಸೇತು ಬರಹಗಾರರ ಪ್ರಶಸ್ತಿ, ಕರ್ನಾಟಕ ...
READ MORE