ಮರಿ ಆನೆಗೆ ಮಾತು ಬಂತು ಡಾ. ಟಿ.ಎಸ್ ರಮಾನಂದ ಅವರ ಅನುಭವ ಕಥನವಾಗಿದೆ. ಪಶುವೈದ್ಯರಾದ ಡಾ. ರಮಾನಂದರು ಈಗಾಗಲೆ ತಮ್ಮ ಅನುಭವ ಕಥನಗಳಿಂದ ಮಕ್ಕಳ ಮನಸ್ಸನ್ನು ಅಯಸ್ಕಾಂತದಂತೆ ಆಕರ್ಷಿಸಿದ್ದಾರೆ. ಈ ಸಂಪುಟಕ್ಕಾಗಿಯೇ ಅವರು ಬರೆದಿರುವ 'ಮರಿ ಆನೆಗೆ ಮಾತು ಬಂತು ಮತ್ತು ಇತರ ಕಥೆಗಳು, ವಾಸ್ತವದ ನೆಲೆಯಲ್ಲಿ ರಮ್ಯಾದ್ಭುತ ಚಹರೆಯನ್ನು ಸೃಷ್ಟಿಸುವ ಹೃದ್ಯ ಕೃತಿ. ಮೂಕ ಪ್ರಾಣಿಗಳ ಜಗತ್ತು ರಮಾನಂದರ ಬರವಣಿಗೆಯಿಂದ ಮಕ್ಕಳಿಗೆ ಮಾತ್ರವಲ್ಲ ಹಿರಿಯರಿಗೂ ಆಪ್ತವಾಗುತ್ತದೆ. ನವುರಾದ ಹಾಸ್ಯ ಲಲಿತವಾದ ಶೈಲಿ ಸೂಕ್ಷ್ಮವಾದ ನಿರೀಕ್ಷೆಗಳು ರಮಾನಂದರ ಬರವಣಿಗೆಯನ್ನು ಮಕ್ಕಳಿಗೆ ಪ್ರಿಯವಾಗಿಸುತ್ತದೆ ಎಂದು ಪುಸ್ತಕದ ಬೆನ್ನುಡಿಯಲ್ಲಿ ಡಾ. ಎಚ್. ಎಸ್. ವೆಂಕಟೇಶ ಮೂರ್ತಿ ಅವರು ತಿಳಿಸಿದ್ದಾರೆ.
ವೃತ್ತಿಯಿಂದ ಪಶುವೈದ್ಯರಾದ ಡಾ. ಟಿ.ಎಸ್. ರಮಾನಂದ ಅವರು ಪ್ರವೃತ್ತಿಯಿಂದ ಲೇಖಕರು. ತಮ್ಮ ವೈದ್ಯಕೀಯ ಅನುಭವವನ್ನು ಸೊಗಸಾದ ರೀತಿಯಲ್ಲಿ ಅಕ್ಷರಕ್ಕೆ ಇಳಿಸಿದ್ದಾರೆ. ಮೂಲತಃ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ತಾಳ್ಯ ಗ್ರಾಮದವರು. 1974 ರಿಂದ ಕರ್ನಾಟಕ ಸರ್ಕಾರದ ಪಶು ಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ 2006 ರಲ್ಲಿ ನಿವೃತ್ತರಾದರು. ಸದ್ಯ ಶಿವಮೊಗ್ಗ ನಿವಾಸಿ. 'ವೈದ್ಯರ ಶಿಕಾರಿ', 'ದಿಟನಾಗರ ಕಂಡರೆ' ಮತ್ತು 'ವೃತ್ತಿ ಪರಿಧಿ' ಇವು ಮೂರು ಪ್ರಕಟಿತ ಕೃತಿಗಳು. ವೃತ್ತಿಯ ಅನುಭವವನ್ನು ತಮ್ಮ ಆಕರ್ಷಕ ಶೈಲಿ ಬರವಣಿಗೆಯ ಮೂಲಕ ಕೃತಿಗಳಾಗಿಸಿದ್ದಾರೆ. ಪಶುವೈದ್ಯರ ವಿಶಿಷ್ಟ ಹಾಗೂ ವಿಶೇಷ ಜೀವನಾನುಭವಗಳನ್ನು ಸಮಾಜಕ್ಕೆ ತಲುಪಿಸಿದ್ದಾರೆ. ...
READ MORE